ಶಾಸಕ ನಾಗೇಂದ್ರ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ ಪ್ರೀತಂ ಗೌಡ
ಹಾಸನ,ಅ.24: ರವಿವಾರ ಮೈಸೂರಿನ ಚಾಮರಾಜ ವಿಧಾನಸಭೆ ಕ್ಷೇತ್ರದ ಶಾಸಕ ಎಲ್. ನಾಗೇಂದ್ರಗೆ ಹಾಸನಾಂಬೆ ದರ್ಶನಕ್ಕೆ ಅಡ್ಡಿ ಮಾಡಿದ ವಿಚಾರವಾಗಿ ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಅವರು ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಕೆಲಸದ ಒತ್ತಡದಿಂದ ಅಧಿಕಾರಿಗಳು ಈ ರೀತಿ ಮಾಡಿರಬಹುದು. ಇನ್ನು
ಯಾವುದೇ ಪಕ್ಷದ ಚುನಾಯಿತ ಪ್ರತಿನಿಧಿ ಬಂದರೂ ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತ ನೀಡಿದೆ. ನಿನ್ನೆ ಸಮನ್ವಯದ ಕೊರತೆಯಿಂದ ಸಮಸ್ಯೆ ಆಗಿದೆ. ನನ್ನ ಹಿರಿಯರು, ಸಹೋದರ ಸಮಾನರಾದ ಶಾಸಕ ನಾಗೇಂದ್ರ ಅವರಲ್ಲಿ ನಾನು ಎಲ್ಲರ ಮುಖೇನ ಕ್ಷಮೆ ಕೇಳುತ್ತೇನೆ' ಎಂದು ತಿಳಿಸಿದರು.
''ಯಾರೂ ಕೂಡ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಬೇಕೆಂದು ಮಾಡಲ್ಲ. ಆಕಸ್ಮಿಕವಾಗಿ ಆಗಿದೆ ಇದನ್ನು ಇಲ್ಲಿಗೆ ಮುಗಿಸೋಣ' ಎಂದರು.
ಇದನ್ನೂ ಓದಿ: ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ
Next Story