ಉದ್ಯಾವರದಲ್ಲಿ ಸೌಹಾರ್ದ ದೀಪಾವಳಿ ಆಚರಣೆ

ಉಡುಪಿ, ಅ.24: ಉದ್ಯಾವರ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ಮುಂಭಾಗದಲ್ಲಿ ಸೌಹಾರ್ದ ಸಮಿತಿ ಉದ್ಯಾವರ ಇದರ ವತಿಯಿಂದ ಸೌಹಾರ್ದ ದೀಪಾವಳಿಯನ್ನು ಸೋಮವಾರ ಆಚರಿಸಲಾಯಿತು.
ದೇವಾಲಯದ ಮುಂಭಾಗದಲ್ಲಿ ದೀಪಗಳನ್ನು ಹಚ್ಚಿ, ತೂಗುದೀಪ ಅಳವಡಿಸಲಾಗಿತ್ತು. ದೇವಾಲಯದ ಸಹಾಯಕ ಧರ್ಮಗುರು ವಂ.ಫಾ. ಲಿಯೊ ಪ್ರವೀಣ್ ಡಿಸೋಜ ಸೌಹಾರ್ದತೆಯ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಪ್ರತಾಪ್ ಕುಮಾರ್ ಉದ್ಯಾವರ, ರೊನಾಲ್ಡ್ ಮನೋಹರ್ ಕರ್ಕಡ, ರಿಯಾಜ್ ಪಳ್ಳಿ, ಜೆರಾಲ್ಡ್ ಪಿರೇರಾ, ಐರಿನ್ ಪಿರೇರಾ ಮತ್ತಿತರರು ಉಪಸ್ಥಿತರಿದ್ದರು. ಸೌಹಾರ್ದ ಸಮಿತಿ ಅಧ್ಯಕ್ಷ ವಿಲ್ಫ್ರೇಡ್ ಡಿಸೋಜ ಸ್ವಾಗತಿಸಿದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.
Next Story





