ಕೊಲ್ಲೂರಿನಲ್ಲಿ ಕುಸಿದು ಬಿದ್ದು ಯುವಕ ಮೃತ್ಯು

ಕೊಲ್ಲೂರು, ಅ.24: ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸಿದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಅ.23ರಂದು ಬೆಳಗ್ಗೆ 10 ಗಂಟೆಗೆ ನಡೆದಿದೆ.
ಮೃತರನ್ನು ಹಾಸನ ಅರಕಲಗೋಡು ನಿವಾಸಿ ಕುಮಾರ್ ಎಂಬವರ ಮಗ ಪ್ರಶಾಂತ್ ಎಂದು ಗುರುತಿಸಲಾಗಿದೆ. ಇವರು ಕುಟುಂಬದೊಂದಿಗೆ ತೀರ್ಥ ಯಾತ್ರೆಗಾಗಿ ಕೊಲ್ಲೂರಿಗೆ ಬಂದಿದ್ದು, ಅಲ್ಲಿ ವಸತಿ ಗೃಹದ ಶೌಚಾಲಯಕ್ಕೆ ಹೋಗಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟರು. ಮೃತರು ಹೃದಯಘಾತ ತೊಂದರಗಳಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





