ಇರಾನ್ ಪರಮಾಣು ಸಂಸ್ಥೆಯ ಕಂಪ್ಯೂಟರ್ ನೆಟ್‌ವರ್ಕ್ ಹ್ಯಾಕ್

ಟೆಹ್ರಾನ್, ಅ.24: ಗುರುತಿಸಲಾಗದ ವಿದೇಶಿ ದೇಶದ ಪರ ಕಾರ್ಯ ನಿರ್ವಹಿಸುವ ಹ್ಯಾಕರ್ಗಳು ಅಂಗಸಂಸ್ಥೆಯ ನೆಟ್ವರ್ಕ್ಗೆ(to the network) ಕನ್ನ ಹಾಕಿದ್ದು ಅದರ ಇ-ಮೇಲ್ (e-mail)ವ್ಯವಸ್ಥೆಯನ್ನು ಕೈವಶ ಮಾಡಿಕೊಂಡಿದ್ದಾರೆ ಎಂದು ಇರಾನ್ ಪರಮಾಣು ಶಕ್ತಿ ಸಂಸ್ಥೆ ರವಿವಾರ ಹೇಳಿದೆ.
ಅನಾಮಧೇಯ ಹ್ಯಾಕಿಂಗ್ ತಂಡ ಈ ಕೃತ್ಯದ ಹೊಣೆ ಹೊತ್ತಿದ್ದು, ಇತ್ತೀಚೆಗೆ ರಾಷ್ಷ್ರದ್ಯಂತ ನಡೆದ ಪ್ರತಿಭಟನೆಗೆ ಸಂಬಂಧಿಸಿ ಬಂಧಿತ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸುವ ಷರತ್ತು ಒಡ್ಡಿದ್ದಾರೆ. ಬಷೆರ್ನಲ್ಲಿರುವ ರಶ್ಯ ನೆರವಿನ ಇರಾನ್ ಪರಮಾಣು ಸ್ಥಾವರಕ್ಕೆ ಸಂಬಂಧಿಸಿದ ಆಂತರಿಕ ಇ-ಮೇಲ್, ಒಪ್ಪಂದಗಳು, ನಿರ್ಮಾಣ ಯೋಜನೆಗಳ ಸುಮಾರು 50 ಗಿಗಾಬೈಟ್ನಷ್ಟು ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ ಎಂದು ಹೇಳಿಕೊಂಡಿರುವ ಹ್ಯಾಕರ್ಗಳು ಈ ಮಾಹಿತಿಯ ಫೈಲ್ಗಳನ್ನೂ ಟೆಲಿಗ್ರಾಂ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ. ಹತಾಶೆಯಿಂದ ನಡೆಸುವ ಇಂತಹ ಕಾನೂನು ಬಾಹಿರ ಕೃತ್ಯಗಳು ಸಾರ್ವಜನಿಕ ಗಮನ ಸೆಳೆಯುವ ಉದ್ದೇಶ ಹೊಂದಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಹಿಂದೆಯೂ ಇರಾನ್ನ ಸರಕಾರಿ ಸಂಸ್ಥೆಗಳ ಮೇಲೆ ಹ್ಯಾಕರ್ಗಳು ದಾಳಿ ನಡೆಸಿದ್ದು, ಈ ಸೈಬರ್ ದಾಳಿಯ ಹಿಂದೆ ಅಮೆರಿಕ ಮತ್ತು ಇಸ್ರೇಲ್ನ ಕೈವಾಡವಿದೆ ಎಂದು ಇರಾನ್ ಆರೋಪಿಸಿತ್ತು.