ಇಸ್ರೇಲ್ ನಲ್ಲಿ 10 ಏಜೆಂಟರ ಬಂಧನ; ಇರಾನ್

ಟೆಹ್ರಾನ್, ಅ.24: ಪಶ್ಚಿಮ ಅಝರ್ಬೈಜಾನ್ (Azerbaijan)ಪ್ರಾಂತದಲ್ಲಿ ಇಸ್ರೇಲ್ ಪರ ಕಾರ್ಯನಿರ್ವಹಿಸುತ್ತಿದ್ದ 10 ಏಜೆಂಟರನ್ನು ಬಂಧಿಸಿರುವುದಾಗಿ ಇರಾನ್ ಅಧಿಕಾರಿಗಳು ಹೇಳಿದ್ದಾರೆ.
ಈ ಏಜೆಂಟರು ಇಸ್ರೇಲ್ ನ ಗುಪ್ತಚರ ಇಲಾಖೆಯ ಅಧಿಕಾರಿಗಳೊಂದಿಗೆ ನೇರ ವೀಡಿಯೊ ಸಂಪರ್ಕ ಹೊಂದಿದ್ದರು ಹಾಗೂ ಮಹತ್ವದ ಮಾಹಿತಿಗಳನ್ನು ರವಾನಿಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಇವರನ್ನು ಬಂಧಿಸಲಾಗಿದೆ ಎಂದು ಇರಾನ್ನ ಫಾರ್ಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ಇರಾನ್ ಹಾಗೂ ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದು ತನ್ನ ವಿರುದ್ಧ ದಾಳಿ ನಡೆಸಲು ಸಶಸ್ತ್ರ ಗುಂಪನ್ನು ಇರಾನ್ ಬೆಂಬಲಿಸಿ ಪ್ರಚೋದಿಸುತ್ತಿದೆ ಎಂದು ಇಸ್ರೇಲ್ ಆರೋಪಿಸುತ್ತಿದೆ. ಇರಾನ್ನ ಹಲವು ಅಧಿಕಾರಿಗಳ ಹತ್ಯೆಯಲ್ಲಿ ಇಸ್ರೇಲ್ನ ಕೈವಾಡವಿದೆ ಎಂದು ಇರಾನ್ ಹೇಳುತ್ತಿದೆ.
Next Story





