‘ಕಾಂತಾರ’ ವಿರುದ್ಧ ಕಾಪಿರೈಟ್ ಆರೋಪ: ಕಾನೂನು ಕ್ರಮಕ್ಕೆ ಮುಂದಾದ Thaikkudam Bridge
ಬೆಂಗಳೂರು : ತಮ್ಮ ಹಾಡನ್ನು ಕೃತಿ ಚೌರ್ಯ ಮಾಡಿದ ಆರೋಪದಲ್ಲಿ ಕನ್ನಡ ಚಲನಚಿತ್ರ 'ಕಾಂತಾರಾ' (Kantara) ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜನಪ್ರಿಯ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಮ್ ಬ್ರಿಜ್ (Thaikkudam Bridge) ಹೇಳಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ತೈಕ್ಕುಡಮ್ ಬ್ರಿಜ್ ಪೋಸ್ಟ್ ಮಾಡಿದ್ದು, ತಮ್ಮ ಹಾಡಿನ ಕಾಪಿರೈಟ್ ಉಲ್ಲಂಘನೆ ಮಾಡಿದ ಬಗ್ಗೆ ಮಾಹಿತಿಯನ್ನು ಪ್ರಸರಿಸುವಂತೆ ತನ್ನ ಅಭಿಮಾನಿಗಳನ್ನು ಕೋರಿದೆ.
"ತೈಕ್ಕುಡಮ್ ಬ್ರಿಜ್ ಮತ್ತು ಕಾಂತಾರ ಜತೆ ಯಾವುದೇ ಸಂಬಂಧ ಇಲ್ಲ ಎನ್ನುವುದನ್ನು ನಮ್ಮ ಶ್ರೋತೃಗಳು ತಿಳಿದು ಕೊಳ್ಳಬೇಕು. ನಮ್ಮ ನವರಸಮ್ ಐಪಿ ಮತ್ತು ವರಾಹರೂಪಂ ನಡುವೆ ಸಾಮ್ಯತೆ ಇರುವುದು ಕೃತಿಚೌರ್ಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ತೈಕ್ಕುಡಮ್ ಬ್ರಿಡ್ಜ್ ಆಪಾದಿಸಿದೆ.
"ನಮ್ಮ ಪ್ರಕಾರ "ಸ್ಫೂರ್ತಿ ಪಡೆಯುವುದು" ಮತ್ತು "ಕೃತಿಚೌರ್ಯ" ನಡೆಸುವ ಬಗ್ಗೆ ವ್ಯತ್ಯಾಸವಿದೆ ಹಾಗೂ ಇದು ನಿರ್ವಿವಾದ. ಇದಕ್ಕೆ ಕಾರಣವಾದ ಚಿತ್ರದ ಸೃಜನಶೀಲ ತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದೆ. ಈ ಬಗ್ಗೆ onmanorama.com ವರದಿ ಮಾಡಿದೆ.








