ಹಿರಿಯ ಸಾಹಿತಿ ಡಾ.ನಾ. ಡಿಸೋಜಗೆ ಬೆದರಿಕೆ ಪತ್ರ; ನಿವಾಸಕ್ಕೆ ಪೊಲೀಸ್ ಭೇಟಿ
ಸಾಗರ : ಹಿರಿಯ ಸಾಹಿತಿ ಡಾ.ನಾ ಡಿಸೋಜ ಅವರಿಗೆ ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಡಿಸೋಜ ಅವರ ನೆಹರು ನಗರ ನಿವಾಸಕ್ಕೆ ಪೋಲೀಸರು ಮಂಗಳವಾರ ಭೇಟಿ ನೀಡಿದರು.
ಪೇಟೆ ಠಾಣೆ ಇನ್ಸ್ ಪೆಕ್ಟರ್ ಸೀತಾರಾಂ ಅವರು ಡಿಸೋಜ ಅವರ ಜೊತೆ ಬೆದರಿಕೆ ಪತ್ರದ ವಿಚಾರವಾಗಿ ಚರ್ಚೆ ನಡೆಸಿ, ಸಾಹಿತಿ ಡಿಸೋಜ ಅವರಿಗೆ ಸೂಕ್ತ ಭದ್ರತೆ ನೀಡುವುದಾಗಿ ಭರವಸೆ ನೀಡಿದರು.
ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್‌ನ ಸಾಗರ ತಾಲೂಕು ಘಟಕದ ಸಭೆಯಲ್ಲಿ ಪಾಲ್ಗೊಂಡಿದ್ದ ನಾ.ಡಿಸೋಜ ಅವರು, ಬೆದರಿಕೆ ಪತ್ರಗಳು ಬಂದಿರುವುದನ್ನು ಬಹಿರಂಗಪಡಿಸಿದ್ದರು.