ಮಸೀದಿಗಳಲ್ಲಿ ಸೂರ್ಯಗ್ರಹಣದ ನಮಾಝ್

ಮಂಗಳೂರು, ಅ.೨೫:ದ.ಕ.ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಮಂಗಳವಾರ ಸೂರ್ಯಗ್ರಹಣದ ನಮಾಝ್ ಹಾಗೂ ಖುತ್ಬಾ ನಡೆಯಿತು.
*ನಗರದ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಖತೀಬ್ ಹಾಜಿ ಅಬುಲ್ ಅಕ್ರಂ ಬಾಖವಿ ಹಾಗೂ ಬಾವುಟ ಗುಡ್ಡದ ಈದ್ಗಾ ಮಸೀದಿಯಲ್ಲಿ ಖತೀಬ್ ಮುಸ್ತಫ ಅಝ್ಹರಿಯ ನೇತೃತ್ವದಲ್ಲಿ ಸೂರ್ಯಗ್ರಹಣ ನಮಾಝ್ ಮತ್ತು ಖುತ್ಬಾ ನಡೆಯಿತು ಎಂದು ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ತಿಳಿಸಿದ್ದಾರೆ.
*ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಇಬ್ರಾಹೀಂ ಖಲೀಲ್ ಮಸೀದಿಯಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಲಾಯಿತು. ಮೌಲವಿ ಅಶ್ರಫ್ ನಮಾಝ್‌ನ ನೇತೃತ್ವ ವಹಿಸಿದ್ದರು ಎಂದು ಮಸೀದಿಯ ಕಾರ್ಯದರ್ಶಿ ಅಹ್ಮದ್ ಅನ್ಸಾರ್ ತಿಳಿಸಿದ್ದಾರೆ.
*ಪುಂಜಾಲಕಟ್ಟೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ನಮಾಝ್ ಮತ್ತು ಖುತ್ಬಾದ ನೇತೃತ್ವವನ್ನು ಖತೀಬ್ ಅಶ್ರಫ್ ಫೈಝಿ ವಹಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.






.jpeg)



