ಪುತ್ತೂರು: ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ನೀಡಿದ ಆರೋಪ; ವೈದ್ಯನ ವಿರುದ್ಧ ದೂರು

ಸಾಂದರ್ಭಿಕ ಚಿತ್ರ
ಪುತ್ತೂರು: ಒಂದೂವರೆ ತಿಂಗಳು ಪ್ರಾಯದ ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ನೀಡಿದ್ದಾರೆ ಎಂದು ಪುತ್ತೂರಿನ ಆಸ್ಪತ್ರೆಯೊಂದರ ವೈದ್ಯರ ವಿರುದ್ಧ ಮಗುವಿನ ತಂದೆ ನಗರ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಕನ್ಯಾನ ನಿವಾಸಿ ಜೀವನ್ ಪ್ರಕಾಶ್ ಡಿ’ಸೋಜಾ ದೂರು ನೀಡಿದ ವ್ಯಕ್ತಿ.
ಅನಾರೋಗ್ಯದ ಕಾರಣ ಪ್ರಕಾಶ್ ಡಿಸೋಜ ಅವರು ಅ.24ರಂದು ತನ್ನ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚುಚ್ಚು ಮದ್ದು ಕೊಡಿಸಿದ್ದರು. ಆದರೆ ಚುಚ್ಚು ಮದ್ದಿನಲ್ಲಿ ಸ್ಟಿಕ್ಕರ್ ಅಂಟಿಸಲಾಗಿದ್ದು, ಅವಧಿ ಮೀರಿದ ದಿನಾಂಕ ಕಂಡು ಬಂದಿತ್ತು.
ತನ್ನ ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ನೀಡಿದ ವೈದ್ಯರ ವಿರುದ್ಧ ದೂರು ನೀಡಿದ್ದ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಲೀಸರು ವೈದ್ಯನನ್ನು ಠಾಣೆಗೆ ಕರೆಯಿಸಿ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story





