ರಿಶಿ ಸುನಾಕ್‌ಗೆ ಶುಭ ಹಾರೈಸಿದ ಲಿಝ್ ಟ್ರಸ್

ಲಂಡನ್,ಅ.25: ಬ್ರಿಟನ್‌ನ ನಿರ್ಗಮನ ಪ್ರಧಾನಿ ಲಿಝ್ ಟ್ರಸ್(Liz Truss) , ಮಂಗಳವಾರ ಪದಗ್ರಹಣ ಮಾಡಿದ ತನ್ನ ಉತ್ತರಾಧಿಕಾರಿ ರಿಶಿ ಸುನಾಕ್(Rishi Sunak)ಗೆ ಶುಭ ಹಾರೈಸಿದ್ದಾರೆ. ಡೌನಿಂಗ್ ಸ್ಟ್ರೀಟ್‌ನಲ್ಲಿರುವ ತನ್ನ ಕಾರ್ಯಾಲಯದ ಮುಂದೆ ಬುಧವಾರ ವಿದಾಯಭಾಷಣ ಮಾಡಿದ ಅವರು ಪ್ರಧಾನಿಯಾಗಿ ‘ರಿಶಿ ಸುನಾಕ್ ಸಂಪೂರ್ಣ ಯಶಸ್ಸನ್ನು ಕಾಣಲಿ’ ('May Rishi Sunak see complete success')ಎಂದು ಹಾರೈಸಿದ್ದಾರೆ. ತನ್ನ 45 ದಿನಗಳ ಅಧಿಕಾರಾವಧಿಯಲ್ಲಿ ತನ್ನ ಕೆಲವೊಂದು ಸಾಧನೆಗಳನ್ನು ಕೂಡಾ ಅವರು ಭಾಷಣದಲ್ಲಿ ಪ್ರಸ್ತಾವಿಸಿದರು.
‘‘ನಾವು ಚಂಡಮಾರುತವನ್ನು ದಾಟಿಕೊಂಡೇ ಸಂಘರ್ಷ ವನ್ನು ಮುಂದುವರಿಸಿದ್ದೇವೆ. ಆದರೆ ನನಗೆ ಬ್ರಿಟನ್, ಬ್ರಿಟಿಶ್ ಜನತೆಯ ಬಗ್ಗೆ ನಂಬಿಕೆಯಿದೆ. ಅಲ್ಲದೆ ಮುಂದೆ ಒಳ್ಳೆಯದಿನಗಳು ಕಾದಿವೆಯೆಂಬುದು ನನಗೆ ತಿಳಿದಿದೆ’’("We have weathered the storm and continued the conflict. But I have faith in Britain and the British people. And I know there are better days ahead.”) ಎಂದಾಕೆ ಹೇಳಿದ್ದಾರೆ.
ತನ್ನ ಸಂಪುಟದ ಅಂತಿಮ ಸಭೆಯಲ್ಲಿ ಪಾಲ್ಗೊಂಡ ಬಳಿಕ ದೊರೆ ಚಾರ್ಲ್ಸ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಲು ಬಕಿಂಗ್‌ಹ್ಯಾಮ್ ಆರಮನೆಗೆ ತೆರಳುವ ಮುನ್ನ ಅರು ವಿದಾಯ ಭಾಷಣ ಮಾಡಿದರು.
ಬ್ರಿಟನ್‌ನ ಪ್ರಧಾನಿಯಾಗಿ, ಎರಡನೆ ಎಲಿಝಬೆತ್ ಅವರ ನಿಧನದ ಶೋಕಾಚರಣೆಗೆ ಇಡೀ ದೇಶದ ನೇತೃತ್ವವನ್ನು ವಹಿಸುವ ಹಾಗೂ ದೊರೆ ಮೂರನೇ ಚಾರ್ಲ್ಸ್ ಅವರ ಸಿಂಹಾಸನಾರೋಹಣದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿದ್ದುದು ತನಗೆ ಲಭಿಸಿದ ಅತಿ ದೊಡ್ಡ ಗೌರವವಾಗಿದೆ ಎಂದು ಲಿಝ್ ಹೇಳಿದರು
ತನ್ನ ಅಧಿಕಾರಾವಧಿಯಲ್ಲಿ ಸರಕಾರವು ಕಠಿಣ ಪರಿಶ್ರಮದಿಂದ ದುಡಿಯುವ ಕುಟುಂಬಗಳಿಗೆ ತ್ವರಿತವಾಗಿ ಹಾಗೂ ನಿರ್ಣಾಯಕವಾಗಿ ಕಾರ್ಯನಿರ್ವಹಿಸಿತು ಎಂದರು. ದಿವಾಳಿತನದಿಂದ ಪಾರಾಗಲು ತನ್ನ ಸರಕಾರವು ಸಾವಿರಾರು ಉದ್ಯಮ ಸಂಸ್ಥೆಗಳಿಗೂ ನೆರವಾಗಿತ್ತು ಎಂದು ಟ್ರಸ್ ತನ್ನ ಸಾಧನೆಗಳನ್ನು ಸ್ಮರಿಸಿಕೊಂಡರು.
ಬ್ರಿಟನ್ ಪ್ರಧಾನಿಯಾಗಿ 45 ದಿನಗಳ ಕಾಲ ಕಾರ್ಯ ನಿರ್ವಹಿಸಿದ ಲಿಝ್ ಟ್ರಸ್ ಅವರು ಬ್ರಿಟನ್‌ನ ಅತ್ಯಂತ ಅಲ್ಪಾವಧಿಯ ಪ್ರಧಾನಿ ಎನಿಸಿಕೊಂಡಿದ್ದಾರೆ.