ರಾಜ್ಯ ರಾಜಧಾನಿಯಲ್ಲಿ ಗ್ರಹಣ ಕಣ್ತುಂಬಿಕೊಂಡ ಜನ..!
ಹಲವು ಕಡೆ ಜನ ಸಂಚಾರ ವಿರಳ; ಬಿಕೋ ಎನ್ನುತ್ತಿದ್ದ ರಸ್ತೆಗಳು

ಬೆಂಗಳೂರು, ಅ.25: ಇಂದಿನ ಆಗಸದಲ್ಲಿ ಗೋಚರಿಸಿದ ಅಪರೂಪದ ಖಗೋಳ ಕೌತುಕ ಪಾಶ್ರ್ವ ಸೂರ್ಯ ಗ್ರಹಣವನ್ನು ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕರು ಸೌರ ಕನ್ನಡಕಗಳನ್ನು ಬಳಸಿ, ಮನೆಗಳಲ್ಲೇ ಗ್ರಹಣ ವೀಕ್ಷಿಸಿದರು.
ಮಂಗಳವಾರ ಸಂಜೆ ಗ್ರಹಣ ಗೋಚರಿಸುವ ಕುರಿತ ಸುದ್ದಿ ಹಬ್ಬಿದ ಹಿನ್ನೆಲೆ ಜನ ಮನೆಯಿಂದ ಹೊರ ಬರಲಿಲ್ಲ. ಹಲವು ಕಡೆ ಹೋಟೆಲ್, ಮಳಿಗೆಗಳು ತೆರೆದಿದ್ದರೂ ಜನರಿಲ್ಲದೆ ಭಣಗುಡುತ್ತಿದ್ದವು. ಪ್ರತಿನಿತ್ಯ ಸಂಚಾರ ದಟ್ಟಣೆಯಿಂದ ಕೂಡಿದ್ದ ಕಾರ್ಪೋರೇಷನ್ ವೃತ್ತ, ಟೌನ್‍ಹಾಲ್ ರಸ್ತೆ, ನೃಪತುಂಗ ರಸ್ತೆ, ಕೆಆರ್ ಪುರ ರಸ್ತೆ,ಯಶವಂತಪುರ ಸೇರಿದಂತೆ ನಗರದ ಬಹುತೇಕ ರಸ್ತೆಗಳು ವಾಹನಗಳಿಲ್ಲದೆ, ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ವೀಕ್ಷಣೆಗೆ ವ್ಯವಸ್ಥೆ: ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಕೆಲವೇ ಮಂದಿಗೆ ಮಾತ್ರ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಸಿಲೊಸ್ಟ್ಯಾಟ್ ಉಪಕರಣದ ಮೂಲಕ ಗ್ರಹಣ ಸೆರೆಹಿಡಿದು, ತಾರಾಲಯದ ವೆಬ್‍ಸೈಟ್ ಮೂಲಕ ಫೇಸ್‍ಬುಕ್, ಟ್ವಿಟರ್ ಹಾಗೂ ಯೂಟ್ಯೂಬ್ ನೇರಪ್ರಸಾರ ಮಾಡಲಾಯಿತು. 15 ಸಾವಿರಕ್ಕೂ ಹೆಚ್ಚು ಮಂದಿ ನೇರಪ್ರಸಾರ ಸೂರ್ಯಗ್ರಹಣವನ್ನು ವೀಕ್ಷಿಸಿದರು.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇಲ್ಲದ ಕಾರಣ, ಸ್ಪಷ್ಟವಾಗಿ ಪಾಶ್ರ್ವ ಸೂರ್ಯಗ್ರಹಣ ಗೋಚರಿಸಿತು. ಸಂಜೆ ವೇಳೆಗೆ ಗ್ರಹಣದ ತೀವ್ರತೆ ಹೆಚ್ಚು ಇತ್ತು ಎಂದು ತಾರಾಲಯದ ನಿರ್ದೇಶಕರು ಮಾಹಿತಿ ನೀಡಿದರು. ಇನ್ನೂ, ಕೋರಮಂಗಲದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್(ಐಐಎ)ಸೇರಿದಂತೆ ವಿವಿಧ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.






.jpg)
.jpg)
.jpg)
.jpg)
.jpg)
.jpg)
.jpg)

