50 ವರ್ಷಗಳಿಂದ ಸ್ನಾನ ಮಾಡದ ‘ವಿಶ್ವದ ಅತ್ಯಂತ ಕೊಳಕು ವ್ಯಕ್ತಿ’ ನಿಧನ

PHOTO: Twitter
ಟೆಹರಾನ್,ಅ.25: ಕಳೆದ ಐದು ದಶಕಗಳಿಂದ ಸ್ನಾನ(bathing)ವನ್ನು ಮಾಡದೆ ‘ಜಗತ್ತಿನ ಅತ್ಯಂತ ಕೊಳಕುವ್ಯಕ್ತಿಯೆಂಬ’("The ugliest person in the world") ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುತ್ತಿದ್ದ ಇರಾನ್ನ ವೃದ್ಧ ಅಮೊಯು ಹಾಜಿ(Amoyu Haji) ಮಂಗಳವಾರ ನಿಧನರಾಗಿದ್ದಾರೆ.
94 ವರ್ಷ ವಯಸ್ಸಿನ ಅಮೊಯು ಏಕಾಂಗಿಯಾಗಿ ವಾಸವಾಗಿದ್ದು, ರವಿವಾರ ದಕ್ಷಿಣ ಇರಾನ್(Southern Iran) ನ ಫಾರ್ಸ್ ಪ್ರಾಂತದಲ್ಲಿರುವ ದೆಜ್ಗಾ ಗ್ರಾಮ(ದೆಜ್ಗಾ ಗ್ರಾಮ)ದಲ್ಲಿ ಕೊನೆಯುಸಿರೆಳೆದಿರುವುದಾಗಿ ಇರ್ನಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ನಾನ ಮಾಡಿದಲ್ಲಿ ತಾನು ರೋಗಪೀಡಿತನಾಗುವ ಅಪಾಯವಿದೆಯೆಂದು ಹೆದರಿ ಆತ ಐವತ್ತು ವರ್ಷಗಳ ಹಿಂದೆಯೇ ಸ್ನಾನ ಮಾಡುವುದನ್ನು ನಿಲ್ಲಿಸಿದ್ದನೆಂದು ವರದಿ ಹೇಳಿದೆ.
ಆದರೆ ಕೆಲವು ತಿಂಗಳುಗಳ ಹಿಂದೆ ಗ್ರಾಮಸ್ಥರು ಆತನನ್ನು ಬಲವಂತವಾಗಿ ಸ್ನಾನಮಾಡಿಸಿದ್ದರು ಎಂದು ಇರ್ನಾ ವರದಿ ತಿಳಿಸಿದೆ.
2013ರಲ್ಲಿ ಅಮೊಯು ಹಾಜಿಯ ಜೀವನದ ಕುರಿತಾಗಿ ಸಾಕ್ಷಚಿತ್ರವೊಂದನ್ನು ನಿರ್ಮಿಸಲಾಗಿತ್ತು.
Next Story