ಅಂಧ ವಿದ್ಯಾರ್ಥಿಗಳ ವಸತಿಗೃಹದಲ್ಲಿ ಬೆಂಕಿ ದುರಂತ: ಕನಿಷ್ಠ 11 ಬಲಿ

ಕಂಪಾಲ,ಅ.25: ಪೂರ್ವ ಉಗಾಂಡ(Uganda)ದಲ್ಲಿ ಅಂಧರ ಶಾಲೆ(School for the blind)ಯ ವಸತಿಗೃಹದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ಮಕ್ಕಳೆಂದು ತಿಳಿದುಬಂದಿದೆ.
ಮುಕೊನೊ ಜಿಲ್ಲೆಯ ಲುಗಾ ಗ್ರಾಮದ ಸಲಾಮಾ ಅಂಧರ ಶಾಲೆಯಲ್ಲಿ ಮಂಗಳವಾರ ನಸುಕಿನಲ್ಲಿ ಈ ದುರಂತ ಸಂಭವಿಸಿದೆ.
ಅಗ್ನಿಅನಾಹುತಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, ಆರು ಮಂದಿಯ ಸ್ಥಿತಿ ಚಿಂತಾನಕವಾಗಿದೆ . ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉಗಾಂಡ ಪೊಲೀಸ್ ಪಡೆ ಮಂಗಳವಾರ ಟ್ವೀಟ್ಮಾಡಿದೆ.
Next Story





