ಆಂಧ್ರಪ್ರದೇಶ: ಪಟಾಕಿ ಸ್ಫೋಟದಿಂದ 40 ಜನರ ಕಣ್ಣುಗಳಿಗೆ ಹಾನಿ

Photo: PTI
ಹೈದರಾಬಾದ್, ಅ. 25: ಈ ವರ್ಷ ದೀಪಾವಳಿ ಆಚರಣೆಯ ಸಂದರ್ಭ ಹೈದರಾಬಾದ್ನಲ್ಲಿ ಕನಿಷ್ಠ 40 ಮಂದಿಯ ಕಣ್ಣಿಗೆ ಹಾನಿ ಉಂಟಾಗಿದೆ.
ಪಟಾಕಿ ಸ್ಫೋಟಗೊಡು ಕಣ್ಣಿಗೆ ಹಾನಿ ಉಂಟಾಗಿ ಕೆಲವು ಮಕ್ಕಳು ಸೇರಿದಂತೆ ಒಟ್ಟು 40 ಮಂದಿ ಸರೋಜಿನಿ ದೇವಿ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 21 ಮಂದಿ ಹೊರ ರೋಗಿಗಳಾಗಿ ಹಾಗೂ 19 ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟಾಕಿ ಸ್ಪೋಟದಿಂದ ಕಣ್ಣಿಗೆ ಹಾನಿ ಉಂಟಾದ ಒಟ್ಟು 40 ಮಂದಿಗೆ ನಾವು ಚಿಕಿತ್ಸೆ ನೀಡುತ್ತಿದ್ದೇವೆ. 21 ಹೊರ ರೋಗಿಗಳು ಹಾಗೂ 19 ಮಂದಿ ದಾಖಲಾಗಿದ್ದಾರೆ. ಒಂದು ಮಗು ಕಣ್ಣನ್ನೇ ಕಳೆದುಕೊಂಡಿದೆ ಎಂದು ಸರೋಜಿನಿ ದೇವಿ ಕಣ್ಣಿನ ಆಸ್ಪತ್ರೆಯ ನಿವಾಸಿ ವೈದ್ಯಕೀಯ ಅಧಿಕಾರಿ ಡಾ. ನಜಾಸಿ ಬೇಗಂ ಅವರು ತಿಳಿಸಿದ್ದಾರೆ.
ಈ ನಡುವೆ ರಿತು ನಗರದ ಮನೆಯೊಂದರಲ್ಲಿ ಪಟಾಕಿ ಸ್ಫೋಟಗೊಂಡು ಕೋಟೇಶ್ವರ ರಾವ್ ಎಂಬವರು ಮೃತಪಟ್ಟಿದ್ದಾರೆ. ಪಟಾಕಿ ತಯಾರಿಸುತ್ತಿರುವ ಸಂದರ್ಭ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯವಾಡದಲ್ಲಿ ರವಿವಾರ ಕೆಲವು ಪಟಾಕಿ ಅಂಗಡಿಗಳಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದರು.





