‘ಪರಿವರ್ತನೆಗಾಗಿ ಹಣತೆ ಹಚ್ಚೋಣ ಬನ್ನಿ - ದೀಪಾವಳಿ ಸಂಭ್ರಮ’ ಕಾರ್ಯಕ್ರಮ

ಮಂಗಳೂರು: ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಮತ್ತು ಜಿಲ್ಲಾ ಕೇಂದ್ರ ಕಾರಾಗೃಹದ ಜಂಟಿ ಆಶ್ರಯದಲ್ಲಿ ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಲೇಖಕಿ ಬಿ.ಎಂ. ರೋಹಿಣಿಯ ತಾಯಿಯ ಸ್ಮರಣಾರ್ಥ, ದೇವಕಿಯಮ್ಮ ದತ್ತಿನಿಧಿ ಕಾರ್ಯಕ್ರಮ ‘ಪರಿವರ್ತನೆಗಾಗಿ ಹಣತೆ ಹಚ್ಚೋಣ ಬನ್ನಿ - ದೀಪಾವಳಿ ಸಂಭ್ರಮ’ ನಡೆಯಿತು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಶ್ವರಪ್ಪಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಬಿ.ಎಂ. ರೋಹಿಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ಸದಸ್ಯೆಯರು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಿ, ಸಿಹಿ ಹಂಚಿ ಬಂಧಿಖಾನೆಯ ನಿವಾಸಿಗಳೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮಿಸಿದರು.
ಸಂಘದ ಅಧ್ಯಕ್ಕೆ ಡಾ. ಜ್ಯೋತಿ ಚೇಳ್ಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ ಹಾಗೂ ಕಾರಾಗೃಹದ ಸಹಾಯಕ ಅಧೀಕ್ಷಕ ರಾಜೇಂದ್ರ ಕುಪಾರ್ದೆ ಉಪಸ್ಥಿತರಿದ್ದರು. ಆಕೃತಿ ಐಎಸ್ ಭಟ್ ಆಶಯ ಗೀತೆ ಹಾಡಿದರು. ದೇವಿಕಾ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.
Next Story





