ಮುಸ್ಲಿಂ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಅನಿವಾಸಿಗಳ ಕೊಡುಗೆ ಅಪಾರ: ಹಾಜಿ ಬದ್ರುದ್ದೀನ್ ಹೆಂತಾರ್
ಮಂಗಳೂರು, ಅ.27: ಹಿಂದೊಮ್ಮೆ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದ್ದ ಮುಸ್ಲಿಂ ಸಮುದಾಯವು ಇತ್ತೀಚಿನ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡುತ್ತಿದೆ. ಇದರಲ್ಲಿ ಅನಿವಾಸಿ ಸಹೋದರರ, ಸಂಘ ಸಂಸ್ಥೆಗಳ ಕೊಡುಗೆ ಅಪಾರವಿದೆ ಎಂದು ಅನಿವಾಸಿ ಉದ್ಯಮಿ ಹಾಜಿ ಬದ್ರುದ್ದೀನ್ ಹೆಂತಾರ್ ಹೇಳಿದ್ದಾರೆ.
ಕೆಮ್ಮಾರ ಶಂಸುಲ್ ಉಲಮಾ ಮೆಮೋರಿಯಲ್ ದಅವಾ ಶರೀಅತ್ ಕಾಲೇಜಿನ ಮೀಲಾದ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಮುಖ್ಯಸ್ಥ ಎಸ್‌ಬಿ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಡಿಬಾಗಿಲು ಮಸೀದಿಯ ಖತೀಬ್ ಶೌಖತ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.
ಹನೀಫ್ ದಾರಿಮಿ ನೆಕ್ಕಿಲಾಡಿ, ಕೊಯಿಲ ಹಸೈನಾರ್ ಹಾಜಿ, ಯುನಿಕ್ ಅಬ್ದುಲ್ ರಹಿಮಾನ್, ಬಡಿಲ ಹುಸೈನ್, ಜಿ. ರಫೀಕ್ ಹಾಜಿ, ಎನ್.ಇಸಾಕ್, ಆದಂ ಹಾಜಿ, ಅಶ್ರಫ್ ಮೌಲವಿ ಕೋಲ್ಪೆ, ಬಾಅಸನಿ ಉಸ್ತಾದ್, ಇಸ್ಮಾಯಿಲ್ ಜಿ, ಅಬ್ದುಲ್ ರಹಿಮಾನ್ ಫೈಝಿ ಕುಂತೂರು, ಕಲಂದರ್ ಗಂಡುಬಾಗಿಲು ಉಪಸ್ಥಿತರಿದ್ದರು.
ಸಂಸ್ಥೆಯ ಮ್ಯಾನೇಜರ್ ಕೆಎಂಎ ಕೊಡುಂಗೈ ಸ್ವಾಗತಿಸಿದರು. ಅಬ್ದುಲ್ ರಝಾಕ್ ದಾರಿಮಿ ವಂದಿಸಿದರು.