ಕೋಟಿ ಕಂಠ ಗಾಯನ: ಅಧಿಕಾರಿಗಳು ಪಾಲ್ಗೊಳ್ಳುವಂತೆ ಸುತ್ತೋಲೆ

ಬೆಂಗಳೂರು, ಅ.27: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಯೋಗದಲ್ಲಿ ನಾಳೆ (ಅ.28) ಬೆಳಗ್ಗೆ 11:30ಗಂಟೆಗೆಹಮ್ಮಿಕೊಂಡಿರುವ ‘ಕೋಟಿ ಕಂಠಗಾಯನ’ ಕಾರ್ಯಕ್ರಮದಲ್ಲಿ ವಿಧಾನಸೌಧ ಅಧಿಕಾರಿ, ಸಿಬ್ಬಂದಿ ವರ್ಗದವರು ಪಾಲ್ಗೊಳ್ಳುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಕನ್ನಡ ನಾಡು ನುಡಿಯಶ್ರೇಷ್ಟತೆಯನ್ನು ಸಾರುವ ನನ್ನ ನಾಡು-ನನ್ನ ಹಾಡು ಸಮೂಹ ಗೀತಗಾಯನಕಾರ್ಯಕ್ರಮದಡಿ ‘ನಾಡಗೀತೆ’, ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸುಕನ್ನಡಡಿಂಡಿಮವ’, ಡಾ.ಡಿ.ಎಸ್ ಕರ್ಕಿ ಅವರ ‘ಹಚ್ಚೇವು ಕನ್ನಡದ ದೀಪ’, ನಾಡೋಜ ಡಾ.ಚೆನ್ನವೀರ ಕಣವಿ ಅವರ ‘ವಿಶ್ವ ವಿನೂತನ ವಿದ್ಯಾಚೇತನ’, ಹಂಸಲೇಖ ಅವರ ‘ಹುಟ್ಟಿದರೆಕ ನ್ನಡ ನಾಡಲ್ಲಿ ಹುಟ್ಟಬೇಕು’ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಹಾಡಲಾಗುತ್ತದೆ.
ಹಾಗಾಗಿ, ವಿಧಾನಸೌಧದ ಎಲ್ಲ ಸಚಿವಾಲಯದ ಸಿಬ್ಬಂದಿ, ಅಧಿಕಾರಿಗಳು ಪೂರ್ವ ದಿಕ್ಕಿನಲ್ಲಿರುವ ಬೃಹತ್ ಮೆಟ್ಟಿಲುಗಳ ಬಳಿ ಸೇರಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಪಿ.ಹೇಮಲತಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





