ಪರಸ್ಪರ ಒಳಿತಿಗಾಗಿ ಅಮೆರಿಕ ಜತೆ ಕೆಲಸ ಮಾಡಲು ಸಿದ್ಧ: ಕ್ಸಿಜಿಂಪಿಂಗ್

ಬೀಜಿಂಗ್, ಅ.27: ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಯನ್ನು ಕಾಪಾಡಲು ಚೀನಾ ಮತ್ತು ಅಮೆರಿಕ ಜತೆಯಾಗಿ ಸಾಗುವ ಮಾರ್ಗವನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ದಾಖಲೆಯ 3ನೇ ಅವಧಿಗೆ ಚೀನಾದ ಅಧ್ಯಕ್ಷ ಗಾದಿಗೇರಿರುವ ಕ್ಸಿಜಿಂಪಿಂಗ್ ಗುರುವಾರ ಹೇಳಿದ್ದಾರೆ.
ಇಂದು ಜಗತ್ತು ಶಾಂತಿಯುತವಾಗಿಲ್ಲ. ಪ್ರಮುಖ ಶಕ್ತಿಗಳಾಗಿರುವ ಚೀನಾ ಮತ್ತು ಅಮೆರಿಕ ನಡುವಿನ ಸಂವಹನ ಮತ್ತು ಸಹಕಾರವನ್ನು ಬಲಪಡಿಸುವುದು ಜಾಗತಿಕ ಸ್ಥಿರತೆ ಮತ್ತು ನಿಶ್ಚಿತತೆಯನ್ನು ಹೆಚ್ಚಿಸಲು ಮತ್ತು ವಿಶ್ವಶಾಂತಿ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಚೀನಾವು ಪರಸ್ಪರ ಹಿತಾಸಕ್ತಿಗಾಗಿ, ಒಳಿತಿಗಾಗಿ, ಶಾಂತಿಯುತ ಸಹಬಾಳ್ವೆ ನಡೆಸಲು ಅಮೆರಿಕದೊಂದಿಗೆ ಕೆಲಸ ಮಾಡಲು ಸಿದ್ಧವಿದೆ. ಇದರಿಂದ ಉಭಯ ದೇಶಗಳಿಗೆ ಮಾತ್ರವಲ್ಲ, ವಿಶ್ವಕ್ಕೇ ಒಳಿತಾಗಲಿದೆ ಎಂದು ಜಿಂಪಿಂಗ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Next Story





