ತೈವಾನ್‍ನಲ್ಲಿ ಯಥಾಸ್ಥಿತಿಯನ್ನು ಚೀನಾ ತಿರಸ್ಕರಿಸಿದೆ: ಅಮೆರಿಕ

ವಾಷಿಂಗ್ಟನ್, ಅ.27: ಚೀನಾವು ತೈವಾನ್‍ನಲ್ಲಿ ದೀರ್ಘಕಾಲದ ಯಥಾಸ್ಥಿತಿಯನ್ನು ತಿರಸ್ಕರಿಸಿದ್ದು ತೈವಾನ್ ಕೈವಶ ಪಡಿಸಿಕೊಳ್ಳುವ ಪ್ರಕ್ರಿಯೆಗೆ ವೇಗ ನೀಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.
4 ದಶಕಗಳಿಂದ ಇದ್ದ ಯಥಾಸ್ಥಿತಿ ಎಂದರೆ ಅಮೆರಿಕವು ಚೀನಾಕ್ಕೆ ಮಾತ್ರ ಮಾನ್ಯತೆ ನೀಡುವುದು ಹಾಗೂ ತೈವಾನ್‍ನ ಸ್ವರಕ್ಷಣೆಗೆ ಶಸ್ತ್ರಾಸ್ತ್ರದ ನೆರವು ಒದಗಿಸುವುದು. ಈ ನಿಲುವು ಚೀನಾ- ಅಮೆರಿಕ ಮಧ್ಯೆ ಸಂಘರ್ಷವಾಗದಂತೆ ತಡೆದಿದೆ. ಆದರೆ ಈಗ ಚೀನಾ ಏಕಾಏಕಿ ಇದನ್ನು ಬದಲಿಸಲು ಹೊರಟಿದೆ. 4 ದಶಗಳಿಂದ ಇರುವ ಯಥಾಸ್ಥಿತಿ ಸ್ವೀಕಾರಾರ್ಹವಲ್ಲ ಎಂದು ಚೀನಾದ ಸರಕಾರ ಪ್ರತಿಪಾದಿಸುತ್ತಿದೆ ಎಂದು ಬ್ಲಿಂಕೆನ್ ಹೇಳಿರುವುದಾಗಿ ವರದಿಯಾಗಿದೆ.
Next Story