ಇರಾನ್: ಹಿಜಾಬ್ ವಿರೋಧಿ ಪ್ರತಿಭಟನೆ ಪವಿತ್ರ ಸ್ಥಳದ ಮೇಲಿನ ದಾಳಿಗೆ ಮೂಲ ಕಾರಣ; ಅಧ್ಯಕ್ಷ ಇಬ್ರಾಹಿಂ ರೈಸಿ

ಟೆಹ್ರಾನ್, ಅ.27: ಮಹ್ಸಾ ಅಮಿನಿಯ ಸಾವಿನ ಬಳಿಕ ಇರಾನ್‍ನಲ್ಲಿ ತೀವ್ರಗೊಂಡ ಹಿಜಾಬ್ ವಿರೋಧಿ ಪ್ರತಿಭಟನೆ ಇರಾನ್‍ನ ಪವಿತ್ರಸ್ಥಳದ ಮೇಲಿನ ದಾಳಿಗೆ ದಾರಿ ಮಾಡಿಕೊಟ್ಟಿದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಗುರುವಾರ ಹೇಳಿದ್ದಾರೆ.
ಇರಾನ್‍ನ ಶಿರಾಝ್ ನಗರದಲ್ಲಿನ ಪ್ರಮುಖ ಶಿಯಾ ಪವಿತ್ರಸ್ಥಳದ ಮೇಲೆ ಬುಧವಾರ ಬಂದೂಕುಧಾರಿಯೊಬ್ಬ ನಡೆಸಿದ ದಾಳಿಯಲ್ಲಿ ಕನಿಷ್ಟ 15 ಮಂದಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಸಿ, ದೇಶದ ಪ್ರಗತಿಯನ್ನು ಅಡ್ಡಿಪಡಿಸುವುದು ಶತ್ರುಗಳ ಉದ್ದೇಶವಾಗಿದೆ ಮತ್ತು ಈ ಗಲಭೆಗಳು ಭಯೋತ್ಪಾದಕ ಕೃತ್ಯಗಳಿಗೆ ವೇದಿಕೆ ಸಜ್ಜುಗೊಳಿಸುತ್ತದೆ ಎಂದಿದ್ದಾರೆ. ಶಿಯಾ ಮುಸ್ಲಿಮರ ಪವಿತ್ರ ಸ್ಥಳದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಯನ್ನು ಪತ್ತೆಹಚ್ಚಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ. ಐಸಿಸ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ವಹಿಸಿಕೊಂಡಿದೆ.
Next Story





