ವಿವಾಹ ಸಮಾರಂಭದಲ್ಲಿ ರಸಗುಲ್ಲಾ ಕೊರತೆ; ಘರ್ಷಣೆಯಲ್ಲಿ ಓರ್ವ ಸಾವು, ಐವರಿಗೆ ಗಾಯ

ಆಗ್ರಾ, ಅ. 27: ಏತ್ಮಾದಪುರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರಸಗುಲ್ಲ ಕೊರತೆಯಾದ ಹಿನ್ನೆಲೆಯಲ್ಲಿ ನಡೆದ ಘರ್ಷಣೆಯಲ್ಲಿ 22 ವರ್ಷದ ಯುವಕನೋರ್ವ ಮೃತಪಟ್ಟಿದ್ದಾನೆ ಹಾಗೂ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ ನಡೆದ ಮೊಹಲ್ಲಾ ಶೈಖಾನ್ ನಿವಾಸಿ ಉಸ್ಮಾನ್ ಅವರ ಪುತ್ರಿಯ ವಿವಾಹದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಸಗುಲ್ಲ ಕೊರತೆ ಕುರಿತಂತೆ ವಧು ಹಾಗೂ ವರನ ಕಡೆಯವರ ನಡುವೆ ವಾಗ್ವಾದ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಏತ್ಮಾದಪುರದ ಸರ್ಕಲ್ ಅಧಿಕಾರಿ ರವಿ ಕಮಾರ್ ಗುಪ್ತಾ ಅವರು ತಿಳಿಸಿದ್ದಾರೆ.
Next Story