ಇಟಲಿ ಸೂಪರ್ ಮಾರ್ಕೆಟ್‍ನಲ್ಲಿ ಇರಿತ: ಫುಟ್ಬಾಲ್ ಆಟಗಾರ ಸೇರಿ ಐವರಿಗೆ ಗಾಯ, ಓರ್ವ ಮೃತ್ಯು

ಮಿಲನ್ : ದಕ್ಷಿಣ ಇಟಲಿಯ ಮಿಲನ್ ನಗರದಲ್ಲಿ ಶಾಪಿಂಗ್ ಸೆಂಟರ್ ಒಳಗಡೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಐದು ಮಂದಿಯನ್ನು ಗಾಯಗೊಳಿಸಿದ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದಾಗಿ ಇಟಲಿ ಮಾಧ್ಯಮಗಳು ವರದಿ ಮಾಡಿವೆ.
ಈ ಸಂಬಂಧ ಪೊಲೀಸರು 46 ವರ್ಷ ವಯಸ್ಸಿನ ಇಟಲಿ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ ಎಂದು ಲಾಪ್ರೆಸ್ಸೆ ಸುದ್ದಿಸಂಸ್ಥೆ ಹೇಳಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸೂಪರ್ ಮಾರ್ಕೆಟ್ ಉದ್ಯೋಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಎಎನ್‍ಎಸ್‍ಎ ಸುದ್ದಿಸಂಸ್ಥೆ ತಿಳಿಸಿದೆ.
ಗಾಯಗೊಂಡ ಇತರರಲ್ಲಿ ಸ್ಪೇನ್‍ನ ಫುಟ್ಬಾಲ್ ಆಟಗಾರ ಪಾಬ್ಲೊ ಮರಿ ಸೇರಿದ್ದಾರೆ. ದಾಳಿಯ ಉದ್ದೇಶ ತಿಳಿದು ಬಂದಿಲ್ಲ. ಇದು ಭಯೋತ್ಪಾದಕ ಕೃತ್ಯ ಎನ್ನುವುದಕ್ಕೆ ಪೂರಕವಾದ ಯಾವ ಅಂಶವೂ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾಗಿ ಲಾಪ್ರೆಸ್ಸೆ ವರದಿ ಮಾಡಿರುವುದಾಗಿ hindustantimes.com ವರದಿ ಮಾಡಿದೆ.
Next Story