ಬಳಂಜ: ಗಾಯಕ ಜಿತೇಂದ್ರ ಶೆಟ್ಟಿ ಕಾರ್ಯಾಣ ನಿಧನ

ಬೆಳ್ತಂಗಡಿ, ಅ.28: ಪಡಂಗಡಿ ಗ್ರಾಮದ ಕಾರ್ಯಾಣ ನಿವಾಸಿ, ಪ್ರಸಕ್ತ ತೆಂಕಕಾರಂದೂರುವಿನಲ್ಲಿ ನೆಲೆಸಿರುವ ಊರಿನ ಪ್ರಸಿದ್ದ ಗಾಯಕ ಜಿತೇಂದ್ರ ಶೆಟ್ಟಿ ಕಾರ್ಯಾಣ(55) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗ್ಗಿನ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಹಲವಾರು ವರ್ಷಗಳಿಂದ ಭಜನೆ, ಸಂಗೀತ, ಭಕ್ತಿ ರಸಮಂಜರಿ ಕಾರ್ಯಕ್ರಮಗಳ ಮುಖೇನಾ ಹಲವಾರು ವೇದಿಕೆಗಳಲ್ಲಿ ಹಾಡಿ ಜನರನ್ನು ರಂಜಿಸಿ, ಗುರುತಿಸಿಕೊಂಡಿದ್ದ ಜಿತೇಂದ್ರ ಶೆಟ್ಟಿ, ಮೃದು, ಸಾಧು ಸ್ವಭಾವದ ವ್ಯಕ್ತಿತ್ವದವರಾಗಿದ್ದರು.
ಸ್ವಾತಿ ಮ್ಯೂಸಿಕಲ್ ಬೆಳ್ತಂಗಡಿ ಇದರ ಸಂಚಾಲಕರಾಗಿ, ನಮ ಮಾತೆರ್ಲ ಒಂಜೇ ಕಲಾ ತಂಡದ ಆಧಾರಸ್ತಂಭವಾಗಿ, ಅನೇಕ ಕಲಾವಿದರಿಗೆ ಬೆಳಕಾಗಿ ಕಲಾವಿದರನ್ನು ಬೆಳೆಸಿ ಕಲೆಗಾಗಿಯೆ ತನ್ನ ಜೀವನವನ್ನು ಸವೆಸಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story





