Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಒಡೆದ ಮನಸ್ಸಿನ ದೇಶವಾಸಿಗಳೂ.. ‘ಭಾರತ್...

ಒಡೆದ ಮನಸ್ಸಿನ ದೇಶವಾಸಿಗಳೂ.. ‘ಭಾರತ್ ಜೋಡೊ’ ಯಾತ್ರೆಯೂ...

ಪ್ರೊ. ಶಿವರಾಮಯ್ಯ, ಬೆಂಗಳೂರುಪ್ರೊ. ಶಿವರಾಮಯ್ಯ, ಬೆಂಗಳೂರು28 Oct 2022 2:28 PM IST
share
ಒಡೆದ ಮನಸ್ಸಿನ ದೇಶವಾಸಿಗಳೂ.. ‘ಭಾರತ್ ಜೋಡೊ’ ಯಾತ್ರೆಯೂ...

1947ರಲ್ಲಿ ದೇಶವನ್ನು ವಿಭಜಿಸಿದರೆ, ಈಗ ಸ್ವಾತಂತ್ರದ ಅಮೃತ ಮಹೋತ್ಸವ ಆಚರಣೆಯ ಹೊತ್ತಿನಲ್ಲಿ ಜನರ ಮನಸ್ಸನ್ನೇ ವಿಭಜಿಸಲಾಗುತ್ತಿದೆ. ಇಂಥ ಹೊತ್ತಿನಲ್ಲಿ ಆಶಾಕಿರಣವಾಗಿ, ರಾಹುಲ್ ಗಾಂಧಿ ಅವರ ‘ಭಾರತ್ ಜೋಡೊ’ ಭಾವೈಕ್ಯತಾ ಯಾತ್ರೆ ಸದ್ದಿಲ್ಲದೆ ದೇಶವನ್ನು ಜೋಡಿಸುವ ಯತ್ನದಲ್ಲಿ ಸಾಗುತ್ತಿರುವಂತೆ ಕಂಡುಬರುತ್ತಿದೆ.

ರಾಹುಲ್ ಗಾಂಧಿಯವರ ‘ಭಾರತ್ ಜೋಡೊ’ ಯಾತ್ರೆಯನ್ನು ಜನ ಜಾತ್ರೆಯನ್ನು ಕಣ್ಣಾರೆ ನೋಡಿದಮೇಲೆ ನನಗೆ ಒಂದೆರಡು ಐತಿಹಾಸಿಕ ಸಂಗತಿಗಳು ನೆನಪಾಗುತ್ತಿವೆ. ಅವುಗಳನ್ನಿಲ್ಲಿ ಪ್ರಸ್ತಾಪಿಸುವುದು ಸೂಕ್ತ ಎಂದೆನಿಸುತ್ತಿದೆ.

ಮೊದಲಿಗೆ, ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಖ್ಯಾತಿವೆತ್ತ ಕೊಲ್ಹಾಪುರದ ರಾಜರ್ಷಿ ಶಾಹು ಮಹಾರಾಜರು ಪಡೆದ ಶಿಕ್ಷಣದ ಭಾಗವಾಗಿ ದೇಶಪ್ರವಾಸ ನಡೆದಿತ್ತು. ಸರ್ ಸ್ಟೀವರ್ಟ್ ಮಿಟ್‌ಫೋರ್ಡ್ ಫ್ರೇಸರ್ ಅವರು ಬ್ರಿಟಿಷ್ ಇಂಡಿಯಾ ಸೇವೆಯಲ್ಲಿ ಐ.ಪಿ.ಎಸ್. ಅಧಿಕಾರಿಯಾಗಿದ್ದರು. ಫ್ರೇಜರ್ ಅವರು ಶಾಹುಮಹಾರಾಜರಿಗೆ ಶಿಕ್ಷಣವನ್ನು ಕ್ರಮಬದ್ಧವಾಗಿ ವ್ಯವಸ್ಥೆಗೊಳಿಸಿದ್ದರು. ಶಾಹುರವರು ಪುಸ್ತಕಗಳಿಗಿಂತ ಅವಲೋಕನದಿಂದ ಹೆಚ್ಚು ಕಲಿತರು. ಗುರು ಫ್ರೇಸರ್ ಅವರ ನೇತೃತ್ವದಲ್ಲಿ ಶಾಹುರವರು ಇತರ ಮಹಾರಾಜರೊಡನೆ ಭಾರತದಲ್ಲಿ ಮೂರು ಪ್ರವಾಸಗಳಿಗೆ ಹೋಗಿದ್ದರು. ಎಪ್ರಿಲ್ 13. 1894ರಲ್ಲಿ ಶಾಹು ಅವರ ಪಟ್ಟಾಭಿಷೇಕವಾಯಿತು. ಅದಕ್ಕಿಂತ ಮುಂಚೆ ಈ ಪ್ರವಾಸಗಳು ನಡೆದವು. ಅವುಗಳಲ್ಲಿ ಎರಡು ಉತ್ತರಭಾರತಕ್ಕೆ ಮತ್ತು ಒಂದು ಪ್ರವಾಸ ದಕ್ಷಿಣ ಭಾರತಕ್ಕೆ. ಶಾಹುರವರು ಪ್ರವಾಸ ಕಾಲದಲ್ಲಿ ಅಧಿಕಾರಿಗಳನ್ನು ಮತ್ತು ಮಹಾರಾಜರನ್ನು ಭೇಟಿ ಮಾಡಬೇಕಾಗಿತ್ತು. ಪ್ರವಾಸ ಕಾಲದ ಘಟನೆಗಳು ಶಾಹುರವರ ವ್ಯಕ್ತಿತ್ವದ ರೂಪಣೆಗೆ ಸಹಾಯಕವಾಗುತ್ತಿತ್ತು ಎಂದು ವರದಿಗಳು ಹೇಳುತ್ತವೆ. ದಕ್ಷಿಣ ಭಾರತ ಪ್ರವಾಸವು ಸಿಲೋನನ್ನು ಸಹ ಒಳಗೊಂಡಿತ್ತು. ವಾಪಸ್ ಬರುತ್ತಾ ಮೈಸೂರು, ಬೆಂಗಳೂರು ಸೇರಿದ್ದವು. ಉತ್ತರ ಭಾರತ ಪ್ರವಾಸವು ಮೌಂಟ್ ಅಬು, ಹೈದರಾಬಾದ್ ಮತ್ತು ಕರಾಚಿಗಳನ್ನು ಒಳಗೊಂಡಿತ್ತು. ಫ್ರೇಸರ್‌ಅವರಿಗೆ ಭಾರತದ ಇತಿಹಾಸ ಮತ್ತು ಭೂಗೋಳದ ಬಗ್ಗೆ ಒಳ್ಳೆಯ ಗ್ರಹಿಕೆ ಇತ್ತು. ಮಹಾರಾಜರು ಮುಂದೆ ಸಮರ್ಥ ಮತ್ತು ಸಂವೇದನಾಶೀಲ ವ್ಯಕ್ತಿಯನ್ನಾಗಿ ರೂಪಿಸಲು ಗುರು ಫ್ರೇಸರರು ಪ್ರಾಮಾಣಿಕ ಪ್ರಯತ್ನ ಮಾಡಿದರು. ಅವರು ನಿವೃತ್ತಿ ಹೊಂದಿದ ಮೇಲೂ ಶಾಹುರವರ ಸಂಪರ್ಕದಲ್ಲಿದ್ದರು.

ಫ್ರೇಸರ್ ಅವರಂಥ ಗುರುಗಳ ಶಿಕ್ಷಣ ಹಾಗೂ ಮಾರ್ಗದರ್ಶನ ಸಿಕ್ಕಿದ್ದರಿಂದ ಶಾಹು ಮಹಾರಾಜರು ಕೊಲ್ಹಾಪುರದಂತಹ ಚಿಕ್ಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿದರು; ಜನರ ರಾಜ್ಯವಾಗಿ ಬೆಳಗಿಸಿದರು. ಅಸ್ಪಶ್ಯರು ಅವರನ್ನು ನಮ್ಮ ಅಬ್ರಹಾಂ ಲಿಂಕನ್ ಎಂದು ಹೊಗಳಿದರು. ಅಸ್ಪಶ್ಯರು ಕೈಗೊಂಡ ಮನ್‌ಗಾವ್ ಸಮ್ಮೇಳನದಲ್ಲಿ ಶಾಹು ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕುರಿತು ‘‘ಒಂದು ಕಾಲ ಬರುವುದು, ಇವರು ಇಡೀ ಭಾರತಕ್ಕೆ ನಾಯಕರಾಗುವರು’’ ಎಂದು ಭವಿಷ್ಯ ನುಡಿದಿದ್ದರು. ಅದು ಸತ್ಯವಾಯಿತು.

ಎರಡನೇ ನಿದರ್ಶನ ಮಹಾತ್ಮಾ ಗಾಂಧಿಯವರ ಭಾರತ ದರ್ಶನ ಪ್ರವಾಸ. ಮಹಾತ್ಮರ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರು. ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿ ಬಂದ ಎಂ.ಕೆ.ಗಾಂಧಿಯು ಒಂದು ಸ್ಥಳದಲ್ಲಿ ನೆಲೆ ನಿಲ್ಲುವುದಕ್ಕೆ ಮುಂಚೆ ಭಾರತವನ್ನೆಲ್ಲ ರೈಲಿನ ಮೂರನೇ ದರ್ಜೆಯಲ್ಲಿ ಪ್ರಯಾಣ ಮಾಡಿ ಆ ತರಗತಿಯವರ ಕಷ್ಟಗಳನ್ನು ತಿಳಿದುಕೊಳ್ಳಬೇಕೆಂದು ಯೋಚನೆ ಮಾಡಿದರು. ಆ ವಿಷಯ ಕುರಿತು ಗೋಖಲೆಯವರೊಂದಿಗೆ ಮಾತನಾಡಿದರು. ಪ್ರಾರಂಭದಲ್ಲಿ ಅವರು ಗಾಂಧಿಯನ್ನು ಹಾಸ್ಯ ಮಾಡಿದರು. ಆದರೆ, ಅವರ ಉದ್ದೇಶ ಏನೆಂದು ತಿಳಿದ ಮೇಲೆ ಸಂತೋಷದಿಂದ ಒಪ್ಪುವರು ಮತ್ತು ಗಾಂಧಿಯವರ ಪ್ರಯಾಣಕ್ಕೆ ಬೇಕಾದ ವಸ್ತು ಪರಿಕರಗಳನ್ನು ಒದಗಿಸಿ ಜೋಡಿಸಿಕೊಡಲು ತಾವೇ ಮುಂದಾದರು ಮತ್ತು ರೈಲ್ವೆ ಪ್ಲಾಟ್‌ಫಾರಂವರೆಗೂ ಬಂದು ಬೀಳ್ಕೊಡುವರು. ಹೀಗೆ ಗಾಂಧೀಜಿ 1915ರಿಂದ 1919ರ ವರೆಗೆ ಅವಿಚ್ಛಿನ್ನವಾಗಿ ಮೂರನೇ ತರಗತಿಯ ಪ್ರಯಾಣ ಮಾಡಿ ಭಾರತ ದರ್ಶನ ಮಾಡುವರು. ಆಮೇಲೆ ಬಂದು ಮುಂಬೈಯಲ್ಲಿ ನೆಲೆಸುವರು. ಆ ಪ್ರವಾಸದ ಎಲ್ಲ ಅನುಭವಗಳನ್ನು ತಮ್ಮ ಆತ್ಮಕಥೆ ಅಥವಾ ‘ನನ್ನ ಸತ್ಯಾನ್ವೇಷಣೆ’ ಎಂಬ ಪುಸ್ತಕದಲ್ಲಿ ದಾಖಲಿಸುತ್ತಾರೆ. ಆ ತರುವಾಯ ಮೋಹನ್‌ದಾಸ್ ಕರಮಚಂದ್ ಗಾಂಧಿ ಮಹಾತ್ಮಾ ಗಾಂಧಿ ಆದುದನ್ನು ಮತ್ತು ಅವರನ್ನು ಹಿಂದುತ್ವವಾದಿ ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ್ದ್ದು, ಜನರು ಗಾಂಧೀಜಿಯವರನ್ನು ‘ರಾಷ್ಟ್ರಪಿತ’ ಎಂದು ಕರೆದದ್ದು ಇತ್ಯಾದಿ ಇತಿಹಾಸ ಎಲ್ಲರಿಗೂ ತಿಳಿದ ವಿಚಾರವೇ!

ಕೊನೆಯದಾಗಿ, ದೇಶ ಸುತ್ತುವುದರಿಂದ ಬರುವ ಅನುಭವ ನಿಜಕ್ಕೂ ಅವರ್ಣನೀಯ. ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಯಿಂದ ದೇಶದ ಸಮುದಾಯಗಳು ಸತ್ಪ್ರೇರಣೆ ಪಡೆಯುತ್ತಾರೆಂಬುದರಲ್ಲಿ ಎರಡು ಮಾತಿಲ್ಲ. ರಾಷ್ಟ್ರಕವಿ ಕುವೆಂಪು ಶತಮಾನದಷ್ಟು ಹಿಂದೆಯೇ ‘ಜಯಹೇ ಕರ್ನಾಟಕ ಮಾತೆ’ ನಾಡಗೀತೆಯಲ್ಲಿ ಭಾರತ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಹಾಡಿದರು. ಆದರೆ ಮೂಲಭೂತವಾದಿಗಳು ಹಿಂದೂ ರಾಷ್ಟ್ರ ಮಾಡುವುದಕ್ಕಾಗಿ ನಾಡಿನ ಕೋಮು ಸೌಹಾರ್ದ ಬಳ್ಳಿಯ ಬುಡಕ್ಕೆ ನಂಜಿನ ಬಿಸಿನೀರು ಎರೆಯುತ್ತಿದ್ದಾರೆ. ಜಾತಿ ರಾಜಕೀಯ, ಅಸ್ಪಶ್ಯತೆ, ಮತ ಮೌಢ್ಯ, ಜ್ಯೋತಿಷ್ಯ, ಭವಿಷ್ಯ ಎಂದು ಜನರಿಗೆ ಮಂಕುಬೂದಿ ಎರಚುವವರು, ಕೆಲವು ರಾಜಕಾರಣಿಗಳ ದೇಶ ಸೀಳುವ ದ್ವೇಷ ಭಾಷಣಗಳು ಮುಂತಾಗಿ ಹದ್ದು ಮೀರುತ್ತಿವೆ. ಆದಾಗ್ಯೂ ಮೀಸಲಾತಿಯಿಂದ ಮೇಲೆ ಬಂದ ಶಾಸಕರು, ಸಂಸದರೂ ಬಹು ಸಂಖ್ಯಾತರಾದ ತಮ್ಮ ಜಾತಿ ಜನಾಂಗಕ್ಕೆ ಆಗುವ ಅವಮಾನ ದೌರ್ಜನ್ಯಗಳನ್ನು ಪ್ರತಿಭಟಿಸದೆ, ಮೂಗಿಗೆ ಮೀಸಲಾತಿ ಬೆಣ್ಣೆ ಹಚ್ಚುವವರೊಂದಿಗೆ ಶಾಮೀಲಾಗಿ ಅಧಿಕಾರ ಹಂಚಿಕೊಳ್ಳುತ್ತಿರುವುದು; ಆಳುವ ಪಕ್ಷಕ್ಕೆ ತುತ್ತೂರಿ ಊದುತ್ತಿರುವ ವಾಟ್ಸ್‌ಆ್ಯಪ್ ಪಟುಗಳು, ಮಾಧ್ಯಮಗಳು; ಇತ್ಯಾದಿ ಗೊಂದಲದ ಗೂಡಾಗುತ್ತಿದೆ ದೇಶ!

‘‘ನಾನು ಎಳೆತಂದಿರುವ ಜಾತ್ಯತೀತತೆಯ ರಥವನ್ನು ಮುಂದು ಮುಂದಕ್ಕೆ ಎಳೆಯಿರಿ. ಸಾಧ್ಯವಾಗದಿದ್ದರೆ ನಿಂತಲ್ಲೇ ಇರಲಿ, ಹಿಂದಕ್ಕೆ ಮಾತ್ರ ಬಿಡಬೇಡಿ ತಡೆದುಕೊಳ್ಳಿ’’ ಎಂದ ಸಂವಿಧಾನ ಶಿಲ್ಪಿಡಾ. ಅಂಬೇಡ್ಕರ್ ಅವರ ಕೊನೆಯ ಸಂದೇಶವನ್ನು ಮರೆತು ಅವರ ಆತ್ಮಕ್ಕೆ ದ್ರೋಹ ಬಗೆಯುತ್ತಿದ್ದಾರೆ-ಸಂವಿಧಾನದಿಂದ ಅನುಕೂಲ ಪಡೆದವರು. ಅಲ್ಲದೆ ವೈದಿಕದ ಕರ್ಮಕಾಂಡವನ್ನು ನಿರಾಕರಿಸಿ ಹೊರಬಂದ ಬಸವಣ್ಣನ ಅನುಯಾಯಿಗಳೂ ಮೂಲಭೂತವಾದಿಗಳ ಕೇಸರೀ ಕೃಪೆಗೆ ಪಾತ್ರರಾಗುತ್ತಿರುವುದು ತೀರ ದುರ್ದೈವ. 1947ರಲ್ಲಿ ದೇಶವನ್ನು ವಿಭಜಿಸಿದರೆ, ಈಗ ಸ್ವಾತಂತ್ರದ ಅಮೃತ ಮಹೋತ್ಸವ ಆಚರಣೆಯ ಹೊತ್ತಿನಲ್ಲಿ ಜನರ ಮನಸ್ಸನ್ನೇ ವಿಭಜಿಸಲಾಗುತ್ತಿದೆ. ಇಂಥ ಹೊತ್ತಿನಲ್ಲಿ ಆಶಾಕಿರಣವಾಗಿ, ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಭಾವೈಕ್ಯತಾ ಯಾತ್ರೆ ಸದ್ದಿಲ್ಲದೆ ದೇಶವನ್ನು ಜೋಡಿಸುವ ಯತ್ನದಲ್ಲಿ ಸಾಗುತ್ತಿರುವಂತೆ ಕಂಡುಬರುತ್ತಿದೆ.

ಕಡೆಯದಾಗಿ ಒಂದು ಮಾತು. ದಕ್ಷಿಣೋತ್ತರ ಈಗ ಸಾಗುತ್ತಿರುವ ರಾಹುಲ್ ಅವರ ‘ಭಾರತ್ ಜೋಡೊ’ ಪಾದಯಾತ್ರೆಯಂತೆಯೇ, ಪೂರ್ವ ಪಶ್ಚಿಮವಾಗಿಯೂ ಬಂಗಾಳದ ರಾಮಕೃಷ್ಣ ಪರಮ ಹಂಸ, ಸ್ವಾಮಿ ವಿವೇಕಾನಂದರ ಜನ್ಮಭೂಮಿ ದಕ್ಷಿಣೇಶ್ವರದ ಬೇಲೂರು ಮಠದಿಂದ ಮಹಾತ್ಮಾ ಗಾಂಧಿಯ ಜನ್ಮಭೂಮಿ ಪೋರ್‌ಬಂದರಿನವರೆಗೆ ರಾಹುಲ್ ಅಥವಾ ಪ್ರಿಯಾಂಕಾ ಗಾಂಧಿ ಅವರು ಮುಂದೆಂದಾದರೂ ಭಾರತ್ ಜೋಡೊ ಯಾತ್ರೆ ಕೈಗೊಂಡರೆ ಒಳ್ಳೆಯದು. ಜನತೆಯ ಆಶೀರ್ವಾದವೇ ಜನಸೇವಕರಿಗೆ ಪರಮೋತ್ತಮ ಸ್ಫೂರ್ತಿ!

share
ಪ್ರೊ. ಶಿವರಾಮಯ್ಯ, ಬೆಂಗಳೂರು
ಪ್ರೊ. ಶಿವರಾಮಯ್ಯ, ಬೆಂಗಳೂರು
Next Story
X