ಚಿರಾಗ್ ಪಾಸ್ವಾನ್ ಎನ್ ಡಿಎ ಪರ ಪ್ರಚಾರ ಮಾಡಲಿದ್ದಾರೆ: ಬಿಹಾರ ಬಿಜೆಪಿ ಅಧ್ಯಕ್ಷ

ಪಾಟ್ನಾ: ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಗೆ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(ಎನ್ ಡಿಎ) ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿಯ ಬಿಹಾರ ಅಧ್ಯಕ್ಷ ಇಂದು ಸ್ಪಷ್ಟಪಡಿಸಿದ್ದಾರೆ, ಜಮುಯಿ ಸಂಸದ ಪಾಸ್ವಾನ್ ಅವರು ಬಿಜೆಪಿ ವಿರುದ್ಧ ಕೋಪಗೊಂಡಿದ್ದಾರೆ ಎಂಬ ವದಂತಿಯ ನಡುವೆಯೇ ಬಿಜೆಪಿ ಅಧ್ಯಕ್ಷ ಸ್ಪಷ್ಟನೆ ನೀಡಿದ್ದಾರೆ.
ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಂಜಯ್ ಜೈಸ್ವಾಲ್, ಚಿರಾಗ್ ಪಾಸ್ವಾನ್ ಅವರು ಬಿಜೆಪಿಯೊಂದಿಗೆ "ಯಾವಾಗಲೂ ಇದ್ದಾರೆ". ಅವರು ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಎರಡು ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
"ಮೈತ್ರಿಕೂಟದ ಎಲ್ಲಾ ಘಟಕಗಳು ಇದಕ್ಕೆ ತಮ್ಮ ಶಕ್ತಿಯನ್ನು ಹಾಕುತ್ತಿವೆ" ಎಂದು ಅವರು ಹೇಳಿದರು.
ರಾಜ್ಯದಲ್ಲಿನ ಮಹಾ ಮೈತ್ರಿ ಸರಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಜೈಸ್ವಾಲ್, ಪ್ರಸ್ತುತ ಮೊಕಾಮಾ ಶಾಸಕ ರಾಷ್ಟ್ರೀಯ ಜನತಾ ದಳದ ಅನಂತ್ ಕುಮಾರ್ ಸಿಂಗ್ ಅವರ ಪತ್ನಿ ಆರ್‌ಜೆಡಿ ಸ್ಥಾನವನ್ನು ಉಳಿಸಿಕೊಳ್ಳಲು ಬಯಸುತ್ತಿದ್ದಾರೆ. ಕ್ಷೇತ್ರದ ವ್ಯಾಪಾರಿಗಳು ಹಾಗೂ ಅಂಗಡಿಯವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.





