ನ.1ರಿಂದ ಮುಲ್ಕಿ ನಿಲ್ದಾಣದಲ್ಲಿ ಮಂಗಳೂರು -ಮುಂಬೈ ರೈಲು ನಿಲುಗಡೆ ರದ್ದು
ಮಂಗಳೂರು, ಅ. 28: ಮುಲ್ಕಿ ರೈಲು ನಿಲ್ದಾಣದಲ್ಲಿ ರೈಲು ನಂ.12133 ಮುಂಬೈ ಸಿಎಸ್‌ಟಿ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ಮತ್ತು ರೈಲು ನಂ.12134 ಮಂಗಳೂರು ಜಂಕ್ಷನ್-ಮುಂಬೈ ಸಿಎಸ್‌ಟಿ ಎಕ್ಸ್‌ಪ್ರೆಸ್‌ನ ತಾತ್ಕಾಲಿಕ ನಿಲುಗಡೆಯನ್ನು ಹಿಂಪಡೆಯಲಾಗಿದೆ.
ನವೆಂಬರ್ 1ರಿಂದ ಜಾರಿಗೆ ಬರುವಂತೆ ಮುಲ್ಕಿ ರೈಲು ನಿಲ್ದಾಣದಲ್ಲಿ ಈ ರೈಲುಗಳ ನಿಲುಗಡೆಯನ್ನು ಹಿಂಪಡೆಯಲಾಗಿದೆ ಎಂದು ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story