Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ನಾನೇಕೆ ಹಿಂದೂ ಅಲ್ಲ? ಎಂದು ಪತ್ರದ ಮೂಲಕ...

ನಾನೇಕೆ ಹಿಂದೂ ಅಲ್ಲ? ಎಂದು ಪತ್ರದ ಮೂಲಕ ವಿವರಿಸಿದ ನಟ ಕಿರಣ್‌ ಶ್ರೀನಿವಾಸ್‌

28 Oct 2022 8:11 PM IST
share
ನಾನೇಕೆ ಹಿಂದೂ ಅಲ್ಲ? ಎಂದು ಪತ್ರದ ಮೂಲಕ ವಿವರಿಸಿದ ನಟ ಕಿರಣ್‌ ಶ್ರೀನಿವಾಸ್‌

ಬೆಂಗಳೂರು: ಸಾಮಾಜಿಕ ನ್ಯಾಯದ ಕುರಿತು ಧ್ವನಿಯೆತ್ತುವ ನಟರಲ್ಲೊಬ್ಬರಾಗಿರುವ ಕನ್ನಡದ ಹಾಗೇ ಸುಮ್ಮನೆ ಖ್ಯಾತಿಯ ಕಿರಣ್‌ ಶ್ರೀನಿವಾಸ್‌ ರವರು ಇದೀಗ ತಮ್ಮ ಸಾಮಾಜಿಕ ತಾಣದ ಖಾತೆಗಳಲ್ಲಿ ಪತ್ರವೊಂದನ್ನು ಬರೆದಿದ್ದಾರೆ. "ನಾನೇಕೆ ಹಿಂದುವಲ್ಲ? ಮತ್ತು ಅದು ಹಿಂದುತ್ವಕ್ಕೆ ಅವಮಾನವಾಗುವುದಿಲ್ಲ ಏಕೆ?" ಎಂಬ ಒಕ್ಕಣೆಯನ್ನು ಪತ್ರಕ್ಕೆ ನೀಡಿದ್ದಾರೆ.

ಅವರು ಬರೆದ ಪತ್ರದ ಸಾರಾಂಶ ಹೀಗಿದೆ.

ನನ್ನ ಪ್ರೀತಿಯ ಸಹ ಹಿಂದೂಗಳೇ, ನಾನು ಹಿಂದೂ ಅಲ್ಲ ಎಂದು ತಿಳಿದುಕೊಳ್ಳುವಲ್ಲಿ ಯಾರಿಗಾದರೂ ಆಸಕ್ತಿಯಿದ್ದರೆ, ನಾನು ಹಿಂದೂ ಅಲ್ಲ. ನಾನು ಹಿಂದೂ ಎಂದು ಹೇಳಲಿಕ್ಕಿರುವ ಕಾರಣಗಳನ್ನೂ ನಾನು ತಿಳಿಸುತ್ತೇನೆ. ನಾನು ಪಟ್ಟಿ ಮಾಡುತ್ತಿರುವ ಕಾರಣಗಳನ್ನು ತಾರ್ಕಿಕ ಮತ್ತು ತರ್ಕಬದ್ಧ ವಿಚಾರಣೆಯ ಮೂಲಕ ಸರಿಯಾಗಿ ಯೋಚಿಸಿ, ಸೂಕ್ಷ್ಮವಾಗಿ ಪರಿಶೀಲಿಸಿದ್ದೇನೆ. ನೀವು ಅದನ್ನು ಓದಿದ ನಂತರ, ನೀವು ಹಿಂದೂ ಆಗಲು ಅರ್ಹರಾಗಿದ್ದೀರಾ ಅಥವಾ ಇಲ್ಲವೇ? ಎಂದು ಪರಿಶೀಲಿಸಲು ನನ್ನ ವಿನಮ್ರ ವಿನಂತಿ.

ನನ್ನ ಅಭಿಪ್ರಾಯದಲ್ಲಿ ಹಿಂದೂ ಅಂದರೆ, ಧರ್ಮಗ್ರಂಥವನ್ನು, ವೇದ, ಉಪನಿಷತ್‌, ಗೀತೆ, ಪುರಾಣಗಳನ್ನು ಗಳನ್ನು ಅಭ್ಯಸಿಸುವವನು. ಇದು ಹಿಂದೂ ಆಗಲಿಕ್ಕಿರುವ ಕನಿಷ್ಠ ಮಟ್ಟದ ಅರ್ಹತೆಯಾಗಿದೆ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದರೂ ಕೂಡಾ, ನನ್ನ ಪೂರ್ವಜರು ಸರಿಯಾಗಿ ಧರ್ಮಗ್ರಂಥಗಳನ್ನು ಅಭ್ಯಸಿಸದಿದ್ದರೆ ನಾನು ನನ್ನನ್ನು ಪ್ರಾಮಾಣಿಕವಾಗಿ ಹಿಂದೂ ಎಂದು ಕರೆಯಲು ಸಾಧ್ಯವಿಲ್ಲ. ನಾನು, ನನ್ನ ತಂದೆ, ತಾಯಿ ಸರಿಯಾಗಿ ಎಲ್ಲಾ ಧರ್ಮ ಗ್ರಂಥಗಳನ್ನು ಅಭ್ಯಸಿಸಿಲ್ಲವೆಂದು ನಾನು ಖಚಿತವಾಗಿ ಹೇಳುತ್ತೇನೆ. ಹಾಗಾಗಿ, ನಾನು ಹಿಂದೂ ಅಲ್ಲ ಎಂದು ಭಾವಿಸುತ್ತೇನೆ.

ಹಿಂದೂ ಕುರಿತಾದ ನೈಜ ಸಾರವನ್ನು ವಿವರಿಸಲು ಯತ್ನಿಸುವ ಹಲವಾರು ವ್ಯಾಖ್ಯಾನಗಳಿವೆ. ಅದು ನೀವು ಯಾರೊಂದಿಗೆ ಪ್ರಶ್ನಿಸುತ್ತಿದ್ದೀರಿ? ಅದರ ಹಿಂದಿನ ಗುರಿಯೇನು? ಎಂಬುವುದರ ಮೇಲೆ ಅವಲಂಬಿತವಾಗಿದೆ. ಆಳವಾದ, ಅರ್ಥಪೂರ್ಣ, ಆಧ್ಯಾತ್ಮಿಕ, ಸಂಕೀರ್ಣ, ಧಾರ್ಮಿಕ ಮತ್ತು ಚಿಂತನೆಯನ್ನು ಪ್ರಚೋದಿಸುವ, ಜೀವನ ವಿಧಾನವನ್ನು ಮುನ್ನಡೆಸುವ ಹಿಂದೂ ಎಂಬ ಒಂದು ಮಾರ್ಗವಿದೆ ಮತ್ತು ಅದು ನಿಜವಾದ ಮಾರ್ಗ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಆದ್ದರಿಂದ “ಹಿಂದೂ ಧರ್ಮ ಒಂದು ಜೀವನ ವಿಧಾನವಾಗಿದೆ” ಮತ್ತು ನಾನು ಇಲ್ಲಿ ಪ್ರಾಮಾಣಿಕವಾಗಿದ್ದು, ಹಿಂದೂ ಅಲ್ಲ ಎಂದು ಒಪ್ಪಿಕೊಳ್ಳಬೇಕು.

ಇದು ಬಹುಶಃ ಅತ್ಯಂತ ಹಳೆಯ, ಬೌದ್ಧಿಕ, ಸಾರ್ವತ್ರಿಕ ಮತ್ತು ಎಲ್ಲಾ ಧರ್ಮಗಳಲ್ಲಿ ಅತ್ಯಂತ ಪ್ರಸ್ತುತವಾದ ಜೀವನ ವಿಧಾನವೆಂಬ ಗೌರವವನ್ನು ಹೊಂದಿದೆ. ಧರ್ಮದಲ್ಲಿ ನಿಜವಾಗಿ ಮುನ್ನಡೆಯುತ್ತಿರುವ ಎಲ್ಲ ಹಿಂದೂಗಳ ಬಗ್ಗೆ ನನಗೆ ಆಳವಾದ ಗೌರವವಿದೆ. ನಾನು ಈ ಹಿಂದೆ ಯಾವುದಾದರೂ ಸಂವೇದನಾಶೀಲ ಆಗಿರದ, ಅಪಹಾಸ್ಯ, ನೋವುಂಟುಮಾಡುವ ವಿಷಯಗಳನ್ನು ಹೇಳಿದ್ದರೆ ನಿಜವಾದ ಹಿಂದೂಗಳು (ಎಲ್ಲಾ ಪವಿತ್ರ ಗ್ರಂಥಗಳನ್ನು ಓದಿರುವವರು) ಯಾರಿಗಾದರೂ ನೋವಾದರೆ ಪ್ರತಿಯೊಬ್ಬರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ ಅಜ್ಞಾನಕ್ಕಾಗಿ ನೀವೆಲ್ಲರೂ ನನ್ನನ್ನು ಕ್ಷಮಿಸುತ್ತೀರಿ ಎಂದು ನನಗೆ ತಿಳಿದಿದೆ ಎಂದು ಬರೆದುಕೊಂಡಿದ್ದಾರೆ.

share
Next Story
X