ಉಪ್ಪಿನಂಗಡಿ: ಕಳಚಿದ ಪೊಲೀಸ್ ಜೀಪು ಚಕ್ರ; ಆರೋಪಿ ಸಹಿತ ಪೊಲೀಸರು ಪಾರು

ಉಪ್ಪಿನಂಗಡಿ: ಅಕ್ರಮ ಮದ್ಯ ಮಾರಾಟದ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೊತ್ತು ಸಹಿತ ಪೊಲೀಸ್ ಠಾಣೆಗೆ ಕರೆ ತರುವ ವೇಳೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಜೀಪಿನ ಚಕ್ರ ಕಳಚಿದ ಘಟನೆ ಶುಕ್ರವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಖಚಿತ ವರ್ತಮಾನದ ಮೇರೆಗೆ ನೆಲ್ಯಾಡಿ ಹೊರ ಠಾಣಾ ವ್ಯಾಪ್ತಿಯ ಉದನೆ ಎಂಬಲ್ಲಿ ವ್ಯಕ್ತಿಯೋರ್ವ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಯ ವಶದಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದು, ಆರೋಪಿಯನ್ನು ಪೊಲೀಸ್ ಜೀಪಿನಲ್ಲಿ ಕುಳ್ಳಿರಿಸಿ ಉಪ್ಪಿನಂಗಡಿ ಠಾಣೆಗೆ ಕರೆ ತರುತ್ತಿದ್ದರು. ಪೊಲೀಸ್ ಠಾಣೆ ಸಮೀಪಿಸುವ ವೇಳೆ ಜೀಪಿನ ಮುಂಭಾಗದ ಚಕ್ರ ಜೀಪಿನಿಂದ ಕಳಚಲ್ಪಟ್ಟು ಅಪಾಯಕ್ಕೆ ಸಿಲುಕಿತ್ತು. ಅದೃಷ್ಟವಶಾತ್ ಯಾರಿಗೂ ಅಪಾಯವಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story





