ಹದಗೆಟ್ಟಿರುವ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಲು ಕಠಿಣ ನಿರ್ಧಾರಗಳ ಅಗತ್ಯವಿದೆ: ಸುನಾಕ್

ಲಂಡನ್, ಅ.28: ಹದಗೆಟ್ಟಿರುವ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಲು ಕಠಿಣ ನಿರ್ಧಾರಗಳ ಅಗತ್ಯವಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಶುಕ್ರವಾರ ಹೇಳಿದ್ದಾರೆ.
ಒಂದು ದೇಶವಾಗಿ ನಾವು ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆದರೆ ಅರ್ಥವ್ಯವಸ್ಥೆಗೆ ಸ್ಥಿರತೆ ತರುವ ವಿಶ್ವಾಸ ನಮಗಿದೆ. ಬ್ರಿಟನ್ ಸರಕಾರದ ಎರವಲು ಮತ್ತು ಸಾಲವನ್ನು ಸುಸ್ಥಿರ ಪಥದಲ್ಲಿ ಮುಂದುವರಿಸಲು ಕಠಿಣ ನಿರ್ಧಾರದ ಅಗತ್ಯವಿದೆ. ನಮ್ಮ ವಿತ್ತಸಚಿವರು ಈ ನಿಟ್ಟಿನಲ್ಲಿ ಈಗಾಗಲೇ ಯೋಜನೆ ರೂಪಿಸುತ್ತಿದ್ದು ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುನಾಕ್ ಹೇಳಿದ್ದಾರೆ.
Next Story