ಅಮೆರಿಕ ಸಂಸತ್ ನ ಸ್ಪೀಕರ್ ಪತಿಯ ಮೇಲೆ ಹಲ್ಲೆ

ವಾಷಿಂಗ್ಟನ್, ಅ.28: ಅಮೆರಿಕ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ(Nancy Pelosi)ಯ ಪತಿ ಪೌಲ್ ಪೆಲೋಸಿ(Paul Pelosi)ಯ ಮೇಲೆ ಅವರ ಕ್ಯಾಲಿಫೋರ್ನಿಯಾ ನಿವಾಸದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ ಮನೆಗೆ ನುಗ್ಗಿದ ವ್ಯಕ್ತಿ ಹಲ್ಲೆ ನಡೆಸಿದ್ದು ಆತನನ್ನು ಬಂಧಿಸಲಾಗಿದೆ ಮತ್ತು ದಾಳಿಗೆ ಪ್ರೇರಣೆಯ ಕುರಿತು ತನಿಖೆ ನಡೆಯುತ್ತಿದೆ. ಪೌಲ್ ಪೆಲೋಸಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಹಲ್ಲೆ ನಡೆದ ಸಂದರ್ಭ ನ್ಯಾನ್ಸಿ ಪೆಲೋಸಿ ಮನೆಯಲ್ಲಿ ಇರಲಿಲ್ಲ ಎಂದು ಸ್ಪೀಕರ್ ಕಚೇರಿಯ ಹೇಳಿಕೆ ತಿಳಿಸಿದೆ.
Next Story