ಎಸ್‌ಪಿ ನಾಯಕ ಅಝಮ್ ಖಾನ್ ರಾಂಪುರ ಶಾಸಕ ಸ್ಥಾನದಿಂದ ಅನರ್ಹ

ಹೊಸದಿಲ್ಲಿ, ಅ. 28: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧದ 2019ರ ದ್ವೇಷ ಭಾಷಣ ಪ್ರಕರಣದಲ್ಲಿ ಮೂರು ವರ್ಷ ಕಾರಾಗೃಹ ಶಿಕ್ಷೆಗೆ ಗುರಿಯಾದ ಬಳಿಕ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್‌ರನ್ನು ರಾಂಪುರ ಕ್ಷೇತ್ರದ ಸ್ಥಾನದಿಂದ ಶುಕ್ರವಾರ ಅನರ್ಹಗೊಳಿಸಲಾಗಿದೆ.
ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿತರಾದರೆ ಹಾಗೂ ಕನಿಷ್ಠ ಎರಡು ವರ್ಷಗಳ ಕಾರಾಗೃಹ ಶಿಕ್ಷೆಗೆ ಒಳಗಾದರೆ ಆತ/ಆಕೆ ಕೂಡಲೇ ಅನ್ವಯವಾಗುವಂತೆ ಸದನದ ಸದಸ್ಯತ್ವವನ್ನು ಕಳೆದುಕೊಳ್ಳುವರು ಎಂದು ಸುಪ್ರೀಂ ಕೋರ್ಟ್‌ನ 2013ರಲ್ಲಿ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ 74 ವರ್ಷದ ಅಝಂ ಖಾನ್ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
Next Story





