ಖ್ಯಾತ ಕ್ರಿಕೆಟ್ ಪಟು ಗಣೇಶ್ ನಾವಡ ನಿಧನ

ಕುಂದಾಪುರ : ಸ್ಥಳೀಯ ರಾಮಮಂದಿರ ರಸ್ತೆಯ ನಿವಾಸಿ ಗಣೇಶ್ ನಾವಡ (64 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಎಸ್.ಡಿ.ಸಿ.ಸಿ. ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾಗಿದ್ದ ಇವರು ಜಿಲ್ಲೆಯ ಹಲವೆಡೆ ಸೇವೆ ಸಲ್ಲಿಸಿದ್ದರು.
ರಾಜ್ಯದ ಖ್ಯಾತ ಕ್ರಿಕೆಟ್ ತಂಡ ಚಕ್ರವರ್ತಿಯ ಮಾಜಿ ಸ್ಪಿನ್ನರ್ ಆಗಿದ್ದ ಇವರು ಚಕ್ರವರ್ತಿ ತಂಡದ ಯಶಸ್ವಿನಲ್ಲಿ ಗಣನೀಯ ಪಾತ್ರ ವಹಿಸಿದ್ದರು.
ಮೃತರು ಪತ್ನಿ, ತಾಯಿ ಹಾಗೂ ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.
Next Story





