Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಬಡಜನರಲ್ಲಿ, ಅಲ್ಪಸಂಖ್ಯಾತರಲ್ಲಿ ಆತಂಕ...

ಬಡಜನರಲ್ಲಿ, ಅಲ್ಪಸಂಖ್ಯಾತರಲ್ಲಿ ಆತಂಕ ಹುಟ್ಟಿಸಿದ ರಿಷಿ ಸುನಕ್

29 Oct 2022 12:05 AM IST
share
ಬಡಜನರಲ್ಲಿ, ಅಲ್ಪಸಂಖ್ಯಾತರಲ್ಲಿ   ಆತಂಕ ಹುಟ್ಟಿಸಿದ ರಿಷಿ ಸುನಕ್

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ಭಾರತದ ಇನ್ಫೋಸಿಸ್ ನಾರಾಯಣಮೂರ್ತಿಯವರ ಅಳಿಯ ರಿಷಿ ಸುನಕ್ ಬ್ರಿಟನ್‌ನ ಪ್ರಧಾನಿಯಾಗಿದ್ದು ಭಾರತೀಯರ ಹೆಮ್ಮೆ ಎಂಬ ಸಹಜ ಉನ್ಮಾದಕ್ಕೆ ಭಾರತದ ಹಲವಾರು ಮಾಧ್ಯಮಗಳು ತುಪ್ಪಸುರಿಯುತ್ತಿವೆ. ಆದರೆ ಸ್ವತಃ ರಿಷಿ ಸುನಕ್ ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ ಮೂಲದ ಅದರೆ ಆಫ್ರಿಕಾದಲ್ಲಿ ನೆಲೆಸಿದ್ದ ತಂದೆತಾಯಿಗಳು ಬ್ರಿಟನ್‌ಗೆ ವಲಸೆ ಹೋದ ಮೇಲೆ ಜನಿಸಿದವರು. ಹೀಗಾಗಿ ಅವರಿಗೆ ಭಾರತದ ಜೊತೆ ನೇರ ಸಂಬಂಧವಿಲ್ಲ. ಆದರೆ ರಿಷಿಯವರು ಕರ್ನಾಟಕದ ನಾರಾಯಣಮೂರ್ತಿಯವರ ಮಗಳನ್ನು ಮದುವೆಯಾಗಿದ್ದಾರೆ. ಹೀಗಾಗಿ ಪರೋಕ್ಷವಾಗಿ ಅವರಿಗೆ ಭಾರತದ ಜೊತೆ ಸಂಬಂಧವಿದೆ. ಈ ಪರೋಕ್ಷ ಸಂಬಂಧವನ್ನು ಭಾರತದ ಹೆಮ್ಮೆಯೆಂದು ಭಾವಿಸುವುದಾದಲ್ಲಿ, ಅಪ್ಪಟ ಭಾರತೀಯಳಾದ ಕರ್ನಾಟಕದ ದಲಿತ ಯುವ ಪ್ರತಿಭೆ ಅಶ್ವಿನಿಯವರು ವಿಶ್ವಸಂಸ್ಥೆಯಲ್ಲಿ ಜನಾಂಗೀಯ ತಾರತಮ್ಯ ಅಧ್ಯಯನದ ಪ್ರಮುಖ ಸ್ಥಾನ ಪಡೆದಾಗ ಇನ್ನು ಹೆಚ್ಚು ಸಂಭ್ರಮಕ್ಕೆ ಕಾರಣವಾಗಬೇಕಿತ್ತಲ್ಲವೇ? ಆದರೆ ಅದರ ಬಗ್ಗೆ ಭಾರತೀಯ ಪತ್ರಿಕೆಗಳು-ಮಾಧ್ಯಮಗಳು ವರದಿ ಮಾಡಿದ್ದು ಅತ್ಯಲ್ಪ. ಏಕಿರಬಹುದು?

ಅದೇ ರೀತಿ ಏಶ್ಯದಿಂದ ವಲಸೆ ಬಂದು ಬ್ರಿಟನ್‌ನ ನಾಗರಿಕತ್ವ ಪಡೆದು ಅಲ್ಲಿನ ಪ್ರಧಾನ ಮಂತ್ರಿಗಿರಿಗೆ ಏರಿದ ರಿಷಿ ಸುನಕ್‌ರ ಕಥನದ ಬಗ್ಗೆ ಹೆಮ್ಮೆ ಪಡುವವರು, ಇಟಲಿಯಿಂದ ಬಂದು ಭಾರತದ ನಾಗರಿಕತ್ವ ಪಡೆದು ಇಲ್ಲಿನ ಜನರಿಂದಲೇ ಆಯ್ಕೆಯಾದರೂ ಪ್ರಧಾನಿಯಾಗುವುದು ಮಾತ್ರ ಅಪರಾಧ ಎಂದು ಅಡ್ಡಿ ಒಡ್ಡಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಸಂಘಪರಿವಾರ ಇನ್ನು ಉತ್ತರಿಸಬೇಕಿದೆ. ಅದೇನೇ ಇರಲಿ. ರಿಷಿ ಸುನಕ್‌ರ ಆಯ್ಕೆಯನ್ನು ಬ್ರಿಟನ್‌ನ ಬಡಜನರು ಹೇಗೆ ಭಾವಿಸುತ್ತಿದ್ದಾರೆಂಬುದು ಅವರು ಹೆಮ್ಮೆಯೋ ಅಥವಾ ಆತಂಕವೋ ಎಂದು ನಿರ್ಧರಿಸುವಲ್ಲಿ ಪ್ರಮುಖವಾದ ಅಂಶವಾಗಬೇಕು. ರಿಷಿಯವರು ಬ್ರಿಟನ್ ರಾಣಿಗಿಂತ ಹೆಚ್ಚಿನ ಶ್ರೀಮಂತರು ಮತ್ತು ಬ್ರಿಟನ್‌ನ ಕಾರ್ಪೊರೇಟ್ ಆರ್ಥಿಕತೆ ಮತ್ತು ಮಾರುಕಟ್ಟೆ ಬಂಡವಾಳಿಗರ ಪಕ್ಷವಾದ ಕನ್ಸರ್ವೇಟಿವ್ ಪಕ್ಷದ ಪ್ರಧಾನಿಯಾಗಿದ್ದಾರೆ. ಅಂದರೆ ಆ ದೇಶದ ಅತ್ಯಂತ ಪ್ರತಿಗಾಮಿ ಪಕ್ಷದ ಪ್ರತಿಗಾಮಿ ಗುಂಪಿನ ನಾಯಕರಾಗಿದ್ದಾರೆ. ಹೀಗಾಗಿಯೇ ಅವರನ್ನು ಬ್ರಿಟನ್‌ನ ಕಾರ್ಪೊರೇಟ್‌ಗಳು ಅಬ್ಬರದಿಂದ ಸ್ವಾಗತಿಸಿದ್ದಾರೆ. ಅದರೆ ಬ್ರಿಟನ್‌ನ ಬಡಜನರು, ಇತರ ವರ್ಣೀಯರು, ಅಲ್ಪಸಂಖ್ಯಾತರು, ನಿರಾಶ್ರಿತರು, ಸುನಕ್‌ರ ಆಯ್ಕೆಯಿಂದ ಕಂಗಾಲಾಗಿದ್ದಾರೆ. ಏಕೆಂದರೆ ರಿಷಿ ಸುನಕ್‌ರ ಬದುಕು, ಆದರ್ಶಗಳೆಲ್ಲವನ್ನು ಪ್ರಭಾವಿಸಿರುವುದು ಕನ್ಸರ್ವೇಟಿವ್ ಪಕ್ಷದ ಪ್ರತಿಷ್ಠಿತ ವರ್ಗಗಳಲ್ಲಿ ಮನೆಮಾಡಿರುವ ದುರಹಂಕಾರಿ ಮೇಲರಿಮೆ ಮತ್ತು ಬಡವರು ಹಾಗೂ ದುರ್ಬಲರ ಬಗ್ಗೆ ತಿರಸ್ಕಾರ ಹಾಗೂ ದ್ವೇಷ.

ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಹೊತ್ತಿನಲ್ಲಿ ಬ್ರಿಟನ್ ಅಪಾರವಾದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಅಲ್ಲಿನ ಕೆಳವರ್ಗದ ಜನರ ಬಡತನ ನಿರಂತರವಾಗಿ ಹೆಚ್ಚುತ್ತಿದೆ. ಇವೆಲ್ಲಕ್ಕೂ ರಿಷಿಯವರ ಕನ್ಸರ್ವೇಟಿವ್ ಪಕ್ಷ ಮತ್ತವರ ಹಿಂದಿನ ನಾಯಕ ಜಾನ್ಸನ್ ಅನುಸರಿಸಿದ ಬ್ರೆಕ್ಸಿಟ್ ಹಾಗೂ ಇತರ ರಾಷ್ಟ್ರೀಯ ದುರಭಿಮಾನಿ ಮತ್ತು ಮಾರುಕಟ್ಟೆ ಪರ ನೀತಿಗಳೇ ಕಾರಣ. ಕನ್ಸರ್ವೇಟಿವ್ ಪಕ್ಷದ ಥಿಂಕ್ ಟ್ಯಾಂಕಿನಲ್ಲಿ ಸುನಕ್ ಪ್ರಮುಖರು. 2008ರ ಹಣಕಾಸು ಕುಸಿತದ ಸಂದರ್ಭದಲ್ಲಿ ಬ್ರಿಟನ್ ಸರಕಾರವು ಸಾಮಾನ್ಯ ಜನರ ಮೇಲೆ ಕಟ್ಟುನಿಟ್ಟಿನ ಆರ್ಥಿಕ ನೀತಿಗಳನ್ನು ಜಾರಿ ಮಾಡಿದ್ದರ ಪರಿಣಾಮವಾಗಿ ಯುನೈಟೆಡ್ ಕಿಂಗ್‌ಡಂನಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಆದರೆ ಅದೇ ಸಂದರ್ಭದಲ್ಲೇ ರಿಷಿ ಸುನಕ್ ಅವರು ಅಪಾರ ಸಂಪತ್ತನ್ನು ಸಂಪಾದಿಸಿದರು.

ಕೋವಿಡ್ ಕಾಲದಲ್ಲಿ ಬ್ರಿಟನ್ ಸರಕಾರದ ಹಣಕಾಸು ಮಂತ್ರಿಯಾಗಿದ್ದ ರಿಷಿ ಸುನಕ್ ಅವರು ಕೋವಿಡ್ ಸಾಂಕ್ರಾಮಿಕದ ಸಂದರ್ಭವನ್ನು ನಿಭಾಯಿಸಲು ಅತ್ಯಂತ ಬಡಕುಟುಂಬಗಳಿಗೆ ಅನುಕೂಲಕಾರಿಯಾಗಿದ್ದ ಸಾರ್ವತ್ರಿಕ ಸಾಲ ಯೋಜನೆಯನ್ನು ವಾರಕ್ಕೆ 20 ಪೌಂಡುಗಳಷ್ಟು ಹೆಚ್ಚಿಸುವ ಯೋಜನೆಯನ್ನು ಸ್ಥಗಿತಗೊಳಿಸಿದ್ದರು. ಹೀಗಾಗಿ ರಿಷಿ ಸುನಕ್ ಭಾರತೀಯ ಮೂಲದವರೆಂದು ಭಾರತವು ಎಷ್ಟೇ ಹೆಮ್ಮೆ ಪಟ್ಟರೂ ಬ್ರಿಟನ್‌ನ ಬಡಜನರು ಆತಂಕಗೊಳಗಾಗಿದ್ದಾರೆ. ಅವರು ತಮ್ಮ ಗೃಹಮಂತ್ರಿಯಾಗಿ ಆಯ್ಕೆ ಮಾಡಿಕೊಂಡಿರುವ ಸುವೆಲ್ಲಾ ಅವರೂ ಭಾರತೀಯ ಮೂಲದ ಮಹಿಳೆಯೇ ಆಗಿದ್ದರೂ ಬಡ ವಲಸೆಗಾರರ ವಿರುದ್ಧ ಹಾಗೂ ಸ್ಲಂ ಜನರ ವಿರುದ್ಧ ಅತ್ಯಂತ ದ್ವೇಷಪೂರಿತ ಧೋರಣೆ ಉಳ್ಳವರಾಗಿದ್ದಾರೆ. ತಮ್ಮ ಬೇಜವಾಬ್ದಾರಿತನಕ್ಕಾಗಿ ಅವರು ಹಿಂದಿನ ಸರಕಾರದಲ್ಲಿ ರಾಜೀನಾಮೆ ಕೊಡಬೇಕಾಗಿ ಬಂದಿದ್ದರೂ ರಿಷಿ ಸುನಕ್ ಆಕೆಯನ್ನೇ ತಮ್ಮ ಗೃಹಮಂತ್ರಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಬ್ರಿಟನ್‌ನಲ್ಲಿ ಕಪ್ಪು ಜನರನ್ನು ಮತ್ತು ಮುಸ್ಲಿಮರನ್ನು ಗುರಿ ಮಾಡಿ ಬ್ರಿಟನ್‌ನ ಪೊಲೀಸರು ನಡೆಸುವ ಜನಾಂಗೀಯ ಮತ್ತು ಹಿಂಸಾತ್ಮಕ ನೀತಿಗಳನ್ನು ಇನ್ನಷ್ಟು ಹೆಚ್ಚಿಸುವ ಭರವಸೆಯನ್ನು ನೀಡಿದ್ದಾರೆ. ಇನ್ನು ನಿರಾಶ್ರಿತ ವಲಸೆಗಾರರ ಪ್ರಶ್ನೆಗೆ ಬರುವುದಾದರೆ ಅವರನ್ನು ರುವಾಂಡಾ ದೇಶದ ಮೃತ್ಯು ಸದೃಶ ಶಿಬಿರಗಳಿಗೆ ಅಟ್ಟಿಬಿಡಬೇಕೆಂಬ ಫ್ಯಾಶಿಸ್ಟ್ ನೀತಿಯನ್ನು ಅಪ್ಪಿಕೊಳ್ಳಲು ರಿಷಿ ಅವರು ತುದಿಗಾಲಲ್ಲಿ ನಿಂತಿದ್ದಾರೆ.

ಅವರ ಗೃಹಮಂತ್ರಿ ಸುವೆಲ್ಲಾ ಅವರು ಮಂತ್ರಿಯಾಗಿ ಪುನರ್ ನೇಮಕವಾದ ನಂತರದ ಪ್ರಥಮ ಪತ್ರಿಕಾಗೋಷ್ಠಿಯಲ್ಲೇ ‘‘ನಿರಾಶ್ರಿತರನ್ನು ತುಂಬಿಕೊಂಡ ಪ್ರಥಮ ವಿಮಾನ ಸದ್ಯದಲ್ಲೇ ರುವಾಂಡಾಗೆ ಪ್ರಯಾಣ ಬೆಳಸಲಿದೆ’’ ಎಂದು ಘೋಷಿಸಿದ್ದಾರೆ. ವಿಪರ್ಯಾಸವೆಂದರೆ ರಿಷಿ ಸುನಕ್‌ರ ಪೂರ್ವಜರೇ ನಿರಾಶ್ರಿತರಾಗಿ ಯುನೈಟೆಡ್ ಕಿಂಗ್‌ಡಂಗೆ ಬಂದಿದ್ದರು. ಇದಲ್ಲದೆ ರಿಷಿ ಸುನಕ್ ಅವರು ಮೋದಿ ಅಳ್ವಿಕೆಗೆ ಸನಿಹವಾಗಿರುವುದು ಕೂಡ ಸ್ಪಷ್ಟವಾಗಿದೆ. ಜಗತ್ತಿನಾದ್ಯಂತ ಹಿಂದುತ್ವವಾದಿ ಶಕ್ತಿಗಳೊಂದಿಗೆ ಮಿತ್ರತ್ವ ಹೊಂದಿರುವ ಇಸ್ರೇಲಿನೊಂದಿಗೆ ಅವರಿಗಿರುವ ಸ್ನೇಹ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ರಿಷಿ ಸುನಕ್ ಅವರು ಜೆರುಸಲೇಂ ಅನ್ನು ಇಸ್ರೇಲಿನ ರಾಜಧಾನಿಯಾಗಿ ಜಗತ್ತು ಒಪ್ಪಿಕೊಳ್ಳಬೇಕೆಂಬುದನ್ನು ಬೆಂಬಲಿಸುತ್ತಾರೆ.ಅಲ್ಲದೇ ಇಸ್ರೇಲಿನ ಘಾತುಕತನವನ್ನು ಜಗತ್ತಿನಾದ್ಯಂತ ಬಯಲು ಮಾಡುತ್ತಿರುವ Boycott, Disinvest, Sanction(BDS) (ಇಸ್ರೇಲನ್ನು-ಬಹಿಷ್ಕರಿಸಿ, ಹೂಡಿಕೆ ಹಿಂದೆಗೆದುಕೊಳ್ಳಿ ಮತ್ತು ನಿರ್ಬಂಧ ವಿಧಿಸಿ) ಚಳವಳಿಯ ಮೇಲೆ ಶಾಸನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನೂ ನೀಡಿದ್ದಾರೆ. ಮೋದಿ ಸರಕಾರದ ಬಗೆಗಿನ ಯಾವುದೇ ವಿಮರ್ಶೆಯನ್ನು ಅಥವಾ ಬ್ರಿಟನ್‌ನಲ್ಲಿರುವ ಹಿಂದುತ್ವ ಫ್ಯಾಶಿಸ್ಟರ ಯಾವುದೇ ಶಾಖೆಗಳ ಮೇಲಿನ ವಿಮರ್ಶೆಯನ್ನು - ಹಿಂದೂ ಫೋಬಿಯಾ- ಹಿಂದೂಗಳನ್ನು ದುರುಳೀಕರಿಸುವ ತಂತ್ರ- ಎಂದು ಪ್ರಚಾರ ಮಾಡುವ ಹಿಂದುತ್ವ ಫ್ಯಾಶಿಸ್ಟರ ಪ್ರಯತ್ನಗಳನ್ನು ರಿಷಿ ಸುನಕ್ ಅವರು ಬೆಂಬಲಿಸುವ ಎಲ್ಲಾ ಸಾಧ್ಯತೆಗಳಿವೆ.

ಕಳೆದ ತಿಂಗಳು ಲೈಸೆಸ್ಟರ್‌ನಲ್ಲಿ ಮುಖವಾಡ ಧರಿಸಿದ ಸಶಸ್ತ್ರ ಹಿಂದುತ್ವವಾದಿಗಳು ಏಶ್ಯನ್ ಸಮುದಾಯಗಳ ವಸತಿ ಪ್ರದೇಶದಲ್ಲಿ ಮೆರವಣಿಗೆ ನಡೆಸಿದ್ದರ ಹಿಂದಿನ ಉದ್ದೇಶ ಮುಸ್ಲಿಮರನ್ನು ಪ್ರಚೋದಿಸಿ ತಮ್ಮ ಹಿಂದೂ ಫೋಬಿಯಾ ಎಂಬ ಕಥನವನ್ನು ಮತ್ತಷ್ಟು ಗಟ್ಟಿಗೊಳಿಸಿಕೂಳ್ಳುವುದೇ ಆಗಿತ್ತು. ಅಲ್ಲದೇ ರಿಷಿ ಸುನಕ್‌ರ ಬೆಂಬಲವನ್ನು ನಿರೀಕ್ಷಿಸುತ್ತಿರುವ ಈ ಶಕ್ತಿಗಳು ಆ ಮೂಲಕ ಈ ಬಗೆಯ ಕೋಮುವಾದಿ ಹಿಂಸಾಚಾರವನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸುವ ಶಕ್ತಿಯನ್ನು ಪಡೆದುಕೊಳ್ಳುವ ಯೋಜನೆಯಲ್ಲಿವೆೆ. ರಿಷಿ ಸುನಕ್ ಅವರು ಪ್ರಧಾನಿಯಾಗುವುದರೊಂದಿಗೆ ಈ ಶಕ್ತಿಗಳು ಇನ್ನಷ್ಟು ಬಲಗೊಳ್ಳುವುದಾದರೆ ಭಾರತವು ಅದಕ್ಕೆ ನಿಜಕ್ಕೂ ಹೆಮ್ಮೆ ಪಡಬೇಕೆ?

share
Next Story
X