ಹಲವು ಪ್ರಮುಖ ಪ್ರತಿಪಕ್ಷ ನಾಯಕರ ಭದ್ರತೆ ಹಿಂಪಡೆದ ಮಹಾರಾಷ್ಟ್ರ ಸರಕಾರ

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷ ಹಾಗೂ ಉದ್ಧವ್ ಠಾಕ್ರೆ ಬಣದ ಹಲವು ಹಿರಿಯ ನಾಯಕರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯನ್ನು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರಕಾರ ಶುಕ್ರವಾರ ರದ್ದುಪಡಿಸಿದೆ.
ಏತನ್ಮಧ್ಯೆ, ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಅವರ ಭದ್ರತೆಯನ್ನು 'ಝಡ್' ವರ್ಗದಿಂದ 'ವೈ-ಪ್ಲಸ್' ಗೆ ಇಳಿಸಲಾಗಿದೆ.
ಅನಿಲ್ ದೇಶಮುಖ್, ಛಗನ್ ಭುಜಬಲ್, ಬಾಳಾಸಾಹೇಬ್ ಥೋರಟ್, ನಿತಿನ್ ರಾವುತ್, ನಾನಾ ಪಟೋಲೆ, ಜಯಂತ್ ಪಾಟೀಲ್, ಸಂಜಯ್ ರಾವುತ್, ವಿಜಯ್ ವಾಡೆತ್ತಿವಾರ್, ಧನಂಜಯ್ ಮುಂಡೆ, ನವಾಬ್ ಮಲಿಕ್, ನರಹರಿ ಜೀರ್ವಾಲ್, ಸುನೀಲ್ ಕೇದಾರ್, ಅಸ್ಲಂ ಶೇಖ್, ಅನಿಲ್ ಪರಬ್ ಇತರ ನಾಯಕರಿಗೆ ಪೊಲೀಸ್ ಭದ್ರತೆ ಕಡಿಮೆ ಮಾಡಲಾಗಿದೆ.
Next Story





