ಅವಕಾಶಗಳನ್ನು ಸದುಪಯೋಗಪಡಿಸಿ ಸವಾಲುಗಳನ್ನು ಎದುರಿಸಿ ಜೀವನ ರೂಪಿಸಿಕೊಳ್ಳಿ: ವೆಂಕಟ್ ಆರ್. ವೇಣುಗೋಪಾಲ್
► BIT, BEADS ಪದವಿ ದಿನಾಚರಣೆ

ಕೊಣಾಜೆ: ಇಂದಿನ ಆಧುನಿಕ ಕಾಲಘಟ್ಟದಲ್ಲಿ ಶೈಕ್ಷಣಿಕ, ಔದ್ಯೋಗಿಕ ಆಯ್ಕೆ ಹಾಗೂ ಅವಕಾಶಗಳು ಬಹಳ ಹೆಚ್ಚಿವೆ. ಆದರೆ ಇದರೊಂದಿಗೆ ಹವಾಮಾನ ಬದಲಾವಣೆಯಂತಹ ಅನೇಕ ಗಂಭೀರ ಸವಾಲುಗಳು ನಮ್ಮ ಮುಂದಿವೆ. ಪರಿಸರ ಪರ ಕಾಳಜಿಯೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ಹೊಸ ಪದವೀಧರರು ಪಣತೊಡಬೇಕಿದೆ ಎಂದು ಬೆಂಗಳೂರಿನ ಷ್ನೇಡರ್ ಇಲೆಕ್ಟ್ರಿಕ್‌ನ ಇಂಜಿನಿಯರಿಂಗ್ - ಡಿಜಿಟಲ್ ಮುಖ್ಯಸ್ಥರು ಮತ್ತು ನಿರ್ದೇಶಕ ವೆಂಕಟ್ ಆರ್. ವೇಣುಗೋಪಾಲ್ (Head & Director of Engineering – Digital, Schneider Electric, Bangalore) ಹೇಳಿದರು.
ಅವರು ಶನಿವಾರ ಮಂಗಳೂರು ಇನೋಳಿಯ ಬ್ಯಾರೀಸ್ ನಾಲೆಜ್ ಕ್ಯಾಂಪಸ್ ನ ಬ್ಯಾರೀಸ್ ಅರೆನಾದಲ್ಲಿ ನಡೆದ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Bearys Institute of Technology- BIT) ಯ ಹತ್ತನೇ ಹಾಗೂ ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (Bearys Enviro-Architecture Design School- BEADS) ಇದರ ಮೂರನೇ ಪದವಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಕಲಿಯುವಿಕೆ ಒಂದು ನಿರಂತರ ಪ್ರಕ್ರಿಯೆ ಹಾಗೂ ಜೀವನದ ಒಂದು ಅವಿಭಾಜ್ಯ ಅಂಗ. ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಸೋತಾಗ ಧೃತಿಗೆಡದೆ ಕಠಿಣ ಪರಿಶ್ರಮದೊಂದಿಗೆ ಮುನ್ನಡೆಯುವುದೇ ಜೀವನದ ಯಶಸ್ವಿಗೆ ದಾರಿ ದೀಪ. ಇಂದಿನ ತಂತ್ರಜ್ಞಾನದ ಯುಗದಲ್ಲಿ ನಮ್ಮಲ್ಲಿರುವ ಕೌಶಲ್ಯ, ಜ್ಞಾನವನ್ನು ಬಳಸಿಕೊಂಡು ಮುನ್ನಡೆದು ಉತ್ತಮ ಸಮಾಜ ನಿರ್ಮಿಸೋಣ ಎಂದು ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ವೈದ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಅವರು Bearys Institute of Health Science ಇದರ ಲೋಗೋ ಅನಾವರಣಗೊಳಿಸಿ ಮಾತನಾಡಿ, ನಮ್ಮಲ್ಲಿ ಕಠಿಣ ಪರಿಶ್ರಮ, ದೃಢತೆ ಇದ್ದರೆ ಯಾವುದೇ ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಮುನ್ನಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಎನ್‌ಐಟಿಕೆ ಸುರತ್ಕಲ್‌ನ ನಿರ್ದೇಶಕ ಡಾ. ಜಿ.ಸಿ. ಮೋಹನ್ ಕುಮಾರ್ ( Director, NITK, Surathkal), ಬೆಂಗಳೂರಿನ ಆರ್ಕಿಟೆಕ್ಚರ್ ಪ್ಯಾರೆಡೈಮ್ ನ ಪ್ರಿನ್ಸಿಪಾಲ್ ಎ.ಆರ್. ಮನೋಜ್ ಲಧಾದ್ (Ar. Manoj Ladhad, co-Founder and Principal Architect, Architecture Paradigm, Bangalore) ಅವರು ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ (Syed Mohamed Beary, Chairman, Bearys Academy of Learning) ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ BEADS ಪ್ರಾಂಶುಪಾಲ ಅಶೋಕ್ ಮೆಂಡೊನ್ಸಾ, ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಎಮರ್ಜಿಂಗ್ ಸಯನ್ಸಸ್ ನ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾ, ಬಿಐಟಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಪ್ರೊ. ಪ್ರಥ್ವಿರಾಜ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಅಬ್ದುಲ್ಲಾ ಗುಬ್ಬಿ, ಡಾ. ವಸಂತ ಕುಮಾರ್, ಮಹಮ್ಮದ್ ಸಿನಾನ್, ಡಾ. ನಳಿನಿ ರೆಬೆಲ್ಲೋ, ಡಾ. ಅಂಜುಮ್ ಖಾನ್ , ಡಾ. ರುಕ್ಸಾನ, ಡಾ. ಮೊಹಮ್ಮದ್, ಪ್ರೊ. ಮಾಲಾಶ್ರೀ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
BIT ಪ್ರಾಂಶುಪಾಲರಾದ ಡಾ.ಮಂಜೂರ್ ಬಾಷಾ ಸ್ವಾಗತಿಸಿದರು. ಸಹ ಪ್ರಾಧ್ಯಾಪಕರುಗಳಾದ ಆಫಿಯಾ ಹಾಗು ಜಾನ್ಸನ್ ಮಿರಾಂಡಾ ಅವರು ನಿರೂಪಿಸಿದರು.
" ಸಯ್ಯದ್ ಬ್ಯಾರಿ ಅತ್ಯುತ್ತಮ ಮಾದರಿ"
ಭವಿಷ್ಯದ ಇಂಜಿನಿಯರ್ ಗಳು ಪರಿಸರ ಸ್ನೇಹಿ ನಿರ್ಮಾಣ ಹಾಗು ತಂತ್ರಜ್ಞಾನಗಳ ಬೆಳವಣಿಗೆಯತ್ತ ಗಮನ ಹರಿಸುವುದು ಅನಿವಾರ್ಯ. ಈಗಾಗಲೇ ಪರಿಸರ ಸ್ನೇಹಿ ನಿರ್ಮಾಣದ ಆದ್ಯ ಪ್ರವರ್ತಕರಾಗಿ ಮುಂಚೂಣಿಯಲ್ಲಿರುವ ಬ್ಯಾರೀಸ್ ಸಂಸ್ಥೆಯ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರೇ ಎಲ್ಲ ಯುವ ಇಂಜಿನಿಯರ್ ಗಳಿಗೆ ಅತ್ಯುತ್ತಮ ಮಾದರಿ.
- ವೆಂಕಟ್ ಆರ್. ವೇಣುಗೋಪಾಲ್
ಷ್ನೇಡರ್ ಇಲೆಕ್ಟ್ರಿಕ್‌ನ ಇಂಜಿನಿಯರಿಂಗ್ - ಡಿಜಿಟಲ್ ಮುಖ್ಯಸ್ಥರು ಮತ್ತು ನಿರ್ದೇಶಕ






.jpeg)
.jpeg)







.jpeg)
















.jpeg)
.jpeg)

.jpeg)
.jpeg)

.jpeg)
.jpeg)



