ಅ. 30ರಂದು ಜೀನ್ ಲೂಕ್ ಗೊದಾ ಚಿತ್ರೋತ್ಸವ
ಉಡುಪಿ: ಉಡುಪಿ ಚಿತ್ರ ಸಮಾಜವು ಕೇರಳ ಸಾಂಸ್ಕೃತಿಕ ಸಾಮಾಜಿಕ ಕೇಂದ್ರ, ಉಡುಪಿ ಇವರ ಸಹಯೋಗ ದಲ್ಲಿ ಒಂದು ದಿನದ ಜೀನ್ ಲೂಕ್ ಗೋದಾ ಚಿತ್ರೋತ್ಸವವನ್ನು ಅ.30ರಂದು ಅಜ್ಜರಕಾಡಿನಲ್ಲಿರುವ ಉಡುಪಿಯ ಜೀವ ವಿಮಾ ನೌಕರರ ಸಂಘಟನೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವು ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿ ಸಂಜೆ ೪.೩೦ಕ್ಕೆ ಕೊನೆ ಗೊಳುತ್ತದೆ. ಚಿತ್ರೋತ್ಸವಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಚಿತ್ರೋತ್ಸವ ದಲ್ಲಿ ೧೯೫೫-೧೯೬೭ರವರೆಗಿನ ಗೋದನ ಮೊದಲ ಹಂತದ ಸಿನೆಮಾ ಕಲಾವಂತಿಕೆಯನ್ನು ಪರಿಚಯಿಸಲಾಗುವುದು. ಆಯ್ದ ಒಂದು ಕಿರು ಚಿತ್ರ ಹಾಗು ಎರಡು ಕಥಾ ಚಿತ್ರಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುವುದು. ಪ್ರತಿ ಪ್ರದರ್ಶನದ ನಂತರ ಕಂಡ ಸಿನೆಮಾದ ಕುರಿತು ಚರ್ಚೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story