ಮುಸ್ಲಿಮ್ ಜಮಾಅತ್‌ನಿಂದ ಮಿಲಾದ್ ಸೌಹಾರ್ದ ಕೂಟ

ಬ್ರಹ್ಮಾವರ: ಕರ್ನಾಟಕ ಮುಸ್ಲಿಂ ಜಮಾಅತ್ ಬ್ರಹ್ಮಾವರ ತಾಲೂಕು ಸಮಿತಿಯ ವತಿಯಿಂದ ಮಿಲಾದ್ ಸೌಹಾರ್ದ ಕೂಟವು ಇತ್ತೀಚೆಗೆ ಬ್ರಹ್ಮಾವರ ಮದರ್ ಪ್ಯಾಲೇಸ್ ಮಿನಿ ಹಾಲ್‌ನಲ್ಲಿ ಜರಗಿತು.
ಸಮಿತಿಯ ಜೀಲ್ಲಾ ಕಾನೂನು ಸಲಹೆಗಾರರಾದ ಅಡ್ವೊಕೇಟ್ ಹಂಝತ್ ಹೆಜಮಾಡಿ ಮಿಲಾದ್ ಸಂದೇಶವನ್ನು ನೀಡಿದರು. ಸಮಿತಿಯ ಅಧ್ಯಕ್ಷ ಜೆ. ಮುಷ್ತಾಕ್ ಅಹ್ಮದ್ ಹೊನ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿಯ ಅಧ್ಯಕ್ಷ ಬಿಎಸ್‌ಎಫ್ ಮಹಮ್ಮದ್ ರಫೀಕ್, ಪ್ರಧಾನ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ, ಕಾರ್ಯದ್ಯಕ್ಷ ಕೆ.ಪಿ.ಇಬ್ರಾಹಿಂ ಮಟಪಾಡಿ, ಉಪಾಧ್ಯಕ್ಷ ಆಬೂಮುಹಮ್ಮದ್ ಕುಂದಾಪುರ, ಕಾರ್ಯದರ್ಶಿ ಉಮರುಲ್ ಫಾರೂಕ್ ರಂಗನಕೆರೆ, ಸದಸ್ಯರಾದ ಮುಹಮ್ಮದ್ ಅಲ್ತಾಫ್ ಮಟಪಾಡಿ, ಅಕ್ಬರ್ ಬಾಷಾ ಬ್ರಹ್ಮಾವರ, ಶಾಬಾನ್ ಹಂಗಳೂರು ಉಪಸ್ಥಿತರಿದ್ದರು.
ವಿಶೇಷ ಆಹ್ವನಿತರಾಗಿ ಆಗಮಿಸಿದ ಶೇಖರ್ ಹಾವಂಜೆ, ಸದಾಶಿವ ಶೆಟ್ಟಿ ಬ್ರಹ್ಮಾವರ, ಪ್ರಭಾಕರ್ ಶೆಟ್ಟಿ ಬೈಕಾಡಿ, ಸತೀಶ್ ಪೂಜಾರಿ ಬಾರಕೂರು, ಫಾ.ಜಾನ್ ಫರ್ನಾಂಡಿಸ್, ಭರತ್ ಕುಮಾರ್ ಶೆಟ್ಟಿ ಬ್ರಹ್ಮಾವರ, ರವಿ ಪಿ. ಗೊನ್ಸಾಲ್ವೀಸ್, ರಾಜಾರಾಂ ಶೆಟ್ಟಿ, ಶ್ಯಾಮ್‌ರಾಜ್ ಬಿರ್ತಿ, ಕುಮಾರ್ ಸುವರ್ಣ, ಆದರ್ಶ್ ಹಿರಿಯಡ್ಕ, ಅಜಿತ್ ಶೆಟ್ಟಿ ಮಧುವನ, ಸುರೇಶ್ ಪೂಜಾರಿ, ಶೀನ ಪೂಜಾರಿ ಹಂದಾಡಿ, ಬಾಲಕೃಷ್ಣ ಪೂಜಾರಿ ಸಾಸ್ತಾನ, ಮನೋಜ್ ಕುಮಾರ್ ಸಾಸ್ತಾನ, ಶ್ರೀನಿವಾಸ್ ಶೆಟ್ಟಿಗಾರ್, ವಿಶ್ವನಾಥ ಶೆಟ್ಟಿ ಮಟಪಾಡಿ ಗಣೇಶ ಶೆಟ್ಟಿ ಹೊನ್ನಾಳ ಸೌಹಾರ್ದತೆಯ ಸಂದೇಶ ನೀಡಿದರು.
ಪ್ರದಾನ ಕಾರ್ಯದರ್ಶಿ ಇಬ್ರಾಹಿಂ ಆದಂ ಮಟಪಾಡಿ ಸ್ವಾಗತಿಸಿದರು. ಜಮಾಲ್ ಮದುವನ, ಹುಸೇನ್ ಪಡುಕೆರೆ, ಅಕ್ಬರ್ ಅಲಿ ಬ್ರಹ್ಮಾವರ, ಅಲ್ಲಾವುದ್ದೀನ್ ಸಾಹೇಬ್ ಹೊನ್ನಾಳ, ಇಸ್ಮಾಯಿಲ್ ಕೋಡಿಕನ್ಯಾನ, ಶಾಕೀರ್ ಹಾವಂಜೆ ಹಾಗೂ ಸಮಿತಿಯ 27 ಸದಸ್ಯರು ಭಾಗವಹಿಸಿದ್ದರು.







