ನ.5-6ರಂದು ಹೊನ್ನಾಳದಲ್ಲಿ ಉರೂಸ್

ಉಡುಪಿ : ಹೊನ್ನಾಳ ಖದೀಮ್ ಜಾಮಿಯ ಮಸೀದಿ ಪರಿಸರದಲ್ಲಿ ಅಂತ್ಯ ವಿಶ್ರಮ ಹೊಂದಿರುವ ಹಜ್ರತೇ ಹಜಾನಿಮಾ ರಹಮತುಲ್ಲಾಹಿ ಅಲೈಹಾ ರವರ ಉರೂಸ್ ಸಮಾರಂಭ ನ.5 ಮತ್ತು 6ರಂದು ನಡೆಯಲಿದೆ.
ನ.5ರಂದು ಫಝರ್ ನಮಾಜಿನ ನಂತರ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಮಗ್ರಿಬ್ ನಮಾಜಿನ ನಂತರ ಮೌಲಾನಾ ಹಾಫೀಝ್ ಮಹಮ್ಮದ್ ಅಶ್ರಫ್ ಸಖಾಪಿ ಕಕ್ಕಿಂಜೆ ಮೂಳೂರ್ ಹಾಗೂ ಈಶಾ ನಮಾಜಿನ ನಂತರ ಸೈಯದ್ ರಬ್ಬಾನಿ ಆಮೀರಿ ಸಖಾಪಿ ಬೆಂಗಳೂರು ಅವರಿಂದ ಪ್ರಭಾಷಣ ನಡೆಯಲಿದೆ. ನ.6ರಂದು ಬೆಳಗ್ಗೆ 9 ಗಂಟೆಯಿಂದ ದಫ್ ಹಾಗೂ ರಾತೀಬ್‌ನೊಂದಿಗೆ ಉರೂಸ್ ರ್ಯಾಲಿ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಎಚ್.ಸುಬ್ಹಾನ್ ಅಹ್ಮದ್ ಹೊನ್ನಾಳ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





