ಸರಕು ಸಾಗಾಟದ ಮೂರು ಸಣ್ಣ ಹಡಗುಗಳಿಗೆ ಬೆಂಕಿ ಪ್ರಕರಣ : 2.50 ಕೋ.ರೂ.ನಷ್ಟ
ಪಣಂಬೂರು ಪೊಲೀಸ್ ಠಾಣೆಗೆ ದೂರು

ಪಣಂಬೂರು ಪೊಲೀಸ್ ಠಾಣೆಗೆ ದೂರು
ಮಂಗಳೂರು, ಅ.29: ನಗರ ಹೊರವಲಯದ ಕಸಬಾ ಬೆಂಗ್ರೆಯಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಸರಕು ಸಾಗಾಟದ ಮೂರು ಸಣ್ಣ ಹಡಗು ಸುಟ್ಟು ಕರಕಲಾಗಿದ್ದರಿಂದ ಸುಮಾರು 2.50 ಕೋ.ರೂ. ನಷ್ಟವಾಗಿದೆ ಎಂದು ಪಣಂಬೂರು ಠಾಣೆಗೆ ದೂರು ನೀಡಲಾಗಿದೆ.
ದುರಸ್ತಿಗೆ ನಿಲ್ಲಿಸಿದ್ದ ಸಣ್ಣ ಹಡಗಿನಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಪಕ್ಕದಲ್ಲಿದ್ದ ಇತರ ಎರಡು ಸಣ್ಣ ಹಡಗಳಿಗೂ ಬೆಂಕಿ ಆವರಿಸಿತ್ತು. ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗವು ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರು.
ಈ ಘಟನೆಯಿಂದ ಮುಹಮ್ಮದ್ ರಫೀಕ್ ಎಂಬವರಿಗೆ ಸೇರಿದ್ದ ಮನೆ ಮತ್ತು ಅಬ್ದುಸ್ಸಮದ್‌ಗೆ ಸೇರಿದ ಒಣಮೀನು ದಾಸ್ತಾನಿಡುವ ಶೆಡ್‌ಗೆ ಹಾನಿಯಾಗಿತ್ತು.
ದುರ್ಘಟನೆಯಿಂದ ಒಟ್ಟು 2.50 ಕೋ.ರೂ. ನಷ್ಟವಾಗಿದೆ ಎಂದು ಹಡಗು ರಿಪೇರಿ ಯಾರ್ಡ್‌ನ ವಾಚ್‌ಮ್ಯಾನ್ ಮುಹಮ್ಮದ್ ಶರೀಫ್ ಅವರು ಪಣಂಬೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Next Story