ಹನೂರು: ಸ್ಮಶಾನವಿಲ್ಲದೆ ಹಳ್ಳದ ಪಕ್ಕದಲ್ಲಿ ಅಂತ್ಯಕ್ರಿಯೆ
ಹನೂರು, ಅ.29: ಸ್ವಾತಂತ್ರ ಬಂದು ಇಷ್ಟು ವರ್ಷಗಳೇ ಕಳೆದರೂ ಅಂತ್ಯಕ್ರಿಯಕ್ಕೆ ಸ್ಮಶಾನವಿಲ್ಲದೆ ಹಳ್ಳದ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಿದ ಘಟನೆ ಹನೂರು ತಾಲೂಕಿನ ಅಂಬಿಕಾಪುರ ಗ್ರಾಮದಲ್ಲಿ ವರದಿಯಾಗಿದೆ.
ತಾಲೂಕಿನ ಅಜ್ಜಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಿಕಾಪುರ ಗ್ರಾಮದ ಆದಿಜಾಂಬವ ಸಮುದಾಯದ ಪಳನಿಯಮ್ಮ ಎಂಬವರು ನಿಧನರಾಗಿದ್ದು, ಮೃತರ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಜಾಗವಿಲ್ಲದೆ ಉಡುತೊರೆ ಹಳ್ಳದ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಿದ್ದು, ಈ ಕುರಿತು ಸ್ಥಳೀಯರು ಸ್ಮಶಾನ ಜಾಗವನ್ನು ಮಂಜೂರು ಮಾಡುವಲ್ಲಿ ನಿರ್ಲಕ್ಷವಹಿಸಿದ ಹನೂರು ತಾಲೂಕಿನ ಶಾಸಕರು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
'ಸ್ಮಶಾನಕ್ಕೆ ಈಗಾಗಲೇ ಸರಕಾರಿ ಜಮೀನು ಗೊತ್ತು ಮಾಡಲಾಗಿದ್ದು, ಸರ್ವೇ ವರದಿ ಹಾಗೂ ಆರ್.ಐ ಅವರ ವರದಿಯನ್ನು ತರಿಸಿಕೊಂಡು ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಆದಷ್ಟು ಬೇಗ ಸರಕಾರಿ ಜಾಗವನ್ನು ಗುರುತಿಸಿ ಸ್ಮಶಾನ ಜಾಗಕ್ಕೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು.'
-ಆನಂದಯ್ಯ, ತಹಶೀಲ್ದಾರ್, ಹನೂರು