ಟ್ವೆಂಟಿ-20 ವಿಶ್ವಕಪ್: ಝಿಂಬಾಬ್ವೆ ವಿರುದ್ಧ 3 ರನ್ ನಿಂದ ಜಯ ಸಾಧಿಸಿದ ಬಾಂಗ್ಲಾದೇಶ

ಬ್ರಿಸ್ಬೇನ್: ಟ್ವೆಂಟಿ-20 ವಿಶ್ವಕಪ್ ನ ಸೂಪರ್-12 ಸುತ್ತಿನ ಗ್ರೂಪ್-2ರ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಝಿಂಬಾಬ್ವೆ ತಂಡವನ್ನು 3 ರನ್ ನಿಂದ ರೋಚಕವಾಗಿ ಮಣಿಸಿ ಸೆಮಿ ಫೈನಲ್ ರೇಸ್ ನಲ್ಲಿ ಉಳಿದಿದೆ.
ರವಿವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 151 ರನ್ ಗಳ ಗುರಿ ಬೆನ್ನಟ್ಟಿದ ಝಿಂಬಾಬ್ವೆ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಝಿಂಬಾಬ್ವೆ ಸ್ಕೋರ್ 17.0 ಓವರ್‌ಗಳ ನಂತರ 5 ವಿಕೆಟ್ ಗೆ 111 ಆಗಿತ್ತು. ಸೀನ್ ವಿಲಿಯಮ್ಸ್ (64 ರನ್, 42 ಎಸೆತ, 8 ಬೌಂಡರಿ) ಮತ್ತು ರೆಗಿಸ್ ಚಕಬ್ವಾ(15) ಇನ್ನಿಂಗ್ಸ್‌ಗೆ ಆಧಾರ ನೀಡಿದರು. ಆದರೆ ನಂತರ ಇಬ್ಬರು ನಿರ್ಗಮಿಸಿದರು.
ಇದಕ್ಕೂ ಮುನ್ನ ನಜ್ಮುಲ್ ಹುಸೈನ್ ಅವರ ಚೊಚ್ಚಲ ಟಿ-20 ಅರ್ಧಶತಕದ (71 ರನ್, 55 ಎಸೆತ, 7 ಬೌಂಡರಿ, 1 ಸಿಕ್ಸರ್) ನೆರವಿನಿಂದ ಬಾಂಗ್ಲಾದೇಶ ತಂಡ ಝಿಂಬಾಬ್ವೆ ವಿರುದ್ಧ 20 ಓವರ್‌ಗಳಲ್ಲಿ 7 ವಿಕೆಟಿಗೆ 150 ರನ್ ಗಳಿಸಿತು.
Next Story