ಟ್ವಿಟರ್ ಕಂಪನಿಯಿಂದ ವಜಾಗೊಳಿಸಬೇಕಾದ ಉದ್ಯೋಗಿಗಳ ಪಟ್ಟಿ ನೀಡುವಂತೆ ಮ್ಯಾನೇಜರ್ ಗೆ ಸೂಚಿಸಿದ ಎಲಾನ್ ಮಸ್ಕ್

ನ್ಯೂಯಾರ್ಕ್: ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ ಅನ್ನು 44 ಶತಕೋಟಿ ಅಮೆರಿಕನ್ ಡಾಲರ್ ಗೆ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಟ್ವಿಟರ್‌ನಲ್ಲಿನ ಉದ್ಯೋಗಿಗಳನ್ನು ವಜಾಗೊಳಿಸಲು ಎಲೋನ್ ಮಸ್ಕ್ ಯೋಜಿಸಿದ್ದಾರೆ. ವಜಾಗೊಳಿಸಬೇಕಾದ ಉದ್ಯೋಗಿಗಳ ಪಟ್ಟಿಯನ್ನು ನೀಡುವಂತೆ ಮ್ಯಾನೇಜರ್ ಗೆ ತಿಳಿಸಿದ್ದಾರೆ ಎಂದು ನಂತರ ಮಾಧ್ಯಮ ವರದಿಯಿಂದ ತಿಳಿದುಬಂದಿದೆ.
ಶನಿವಾರದಂದು ಟ್ವಿಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ವಜಾಗೊಳಿಸುವ ಕಾರ್ಯ ಆರಂಭಿಸಲು ಯೋಜಿಸಿದ್ದಾರೆ ಎಂದು “ನ್ಯೂಯಾರ್ಕ್ ಟೈಮ್ಸ್’’ ವರದಿ ಮಾಡಿದೆ.
ಮಸ್ಕ್ ಅವರು ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಉದ್ಯೋಗವನ್ನು ಕಡಿತಗೊಳಿಸುತ್ತಾರೆ ಎಂದು ವರದಿಗಳು ಹರಿದಾಡುತ್ತಿದ್ದವು. ಕಂಪನಿಯಲ್ಲಿನ 75 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸಬಹುದು ಎಂದು ವರದಿಗಳು ಹೇಳಿವೆ.
" ಟ್ವಿಟರ್ ಖರೀದಿಸಲು 44 ಬಿಲಿಯನ್ ಡಾಲರ್ ಒಪ್ಪಂದವನ್ನು ಗುರುವಾರ ಪೂರ್ಣಗೊಳಿಸಿದ ಮಸ್ಕ್, ಕಂಪನಿಯಾದ್ಯಂತ ಕಡಿತಗೊಳಿಸಲು ಆದೇಶಿಸಿದ್ದಾರೆ ಎಂದು NYT ವರದಿ ಹೇಳಿದೆ. ಸುಮಾರು 7,500 ಉದ್ಯೋಗಿಗಳನ್ನು ಹೊಂದಿರುವ ಕಂಪನಿಯಲ್ಲಿ "ವಜಾಗೊಳಿಸುವಿಕೆಯ ಪ್ರಮಾಣ" ನಿರ್ಧರಿಸಲಾಗುವುದಿಲ್ಲ ಎಂದು ತಿಳಿದುಬಂದಿದೆ.