ಕೊಯಮತ್ತೂರು ಸ್ಫೋಟದ ಕುರಿತು ಕೇಂದ್ರ ಎಚ್ಚರಿಕೆ ನೀಡಿತ್ತು ಎಂಬ ಅಣ್ಣಾಮಲೈ ಹೇಳಿಕೆಯನ್ನು ʼಅಸಂಬದ್ಧʼ ಎಂದ ತ.ನಾ ಪೊಲೀಸ್

ಕೊಯಮತ್ತೂರು: ಕೊಯಮತ್ತೂರಿನಲ್ಲಿ ಕಾರ್ ಸ್ಫೋಟಕ್ಕೆ ನಾಲ್ಕು ದಿನಗಳ ಮೊದಲು ಕೇಂದ್ರವು ಎಚ್ಚರಿಕೆ ನೀಡಿತ್ತು ಎಂಬ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸರು "ಸುಳ್ಳು ಆರೋಪಗಳನ್ನು" ಹೊರಿಸುವ ಮೂಲಕ ಪೊಲೀಸ್ ಪಡೆಯನ್ನು "ಮಾನಹಾನಿ" ಮಾಡಿದ್ದಾರೆ ಎಂದು ಹೇಳಿದ್ದಾರೆ.
ಶನಿವಾರ ರಾತ್ರಿ ನೀಡಿದ ಹೇಳಿಕೆಯಲ್ಲಿ, "ಅಣ್ಣಾಮಲೈ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) "ಪ್ರಕರಣವನ್ನು ವರ್ಗಾಯಿಸುವಲ್ಲಿ ವಿಳಂಬವಾಗಿದೆ" ಎಂದು ಆರೋಪಿಸಿ ತನಿಖೆಯನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಅಕ್ಟೋಬರ್ 23 ರಂದು ಕೊಯಮತ್ತೂರಿನ ಉಕ್ಕಡಂ ಪ್ರದೇಶದ ದೇವಸ್ಥಾನದ ಹೊರಗೆ ಎಲ್‌ಪಿಜಿ ಸಿಲಿಂಡರ್ ಸಾಗಿಸುತ್ತಿದ್ದ ಮಾರುತಿ 800 ಸ್ಫೋಟಗೊಂಡಿತ್ತು, ಅದರಲ್ಲಿದ್ದ ಇಂಜಿನಿಯರಿಂಗ್ ಪದವೀಧರ ಜಮೀಶಾ ಮುಬಿನ್ ತಕ್ಷಣವೇ ಸಾವನ್ನಪ್ಪಿದ್ದ.
ಸ್ಫೋಟವನ್ನು "ಆತ್ಮಹತ್ಯಾ ದಾಳಿ" ಎಂದು ಕರೆದ ಅಣ್ಣಾಮಲೈ ಪೊಲೀಸ್ ತನಿಖೆಯನ್ನು ಪ್ರಶ್ನಿಸಿದರು ಮತ್ತು ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಸಂಭವನೀಯ ಭಯೋತ್ಪಾದನಾ ದಾಳಿಯ ಬಗ್ಗೆ ತಮಿಳುನಾಡಿಗೆ ಕೇಂದ್ರವು "ನಿರ್ದಿಷ್ಟ ಎಚ್ಚರಿಕೆ" ನೀಡಿದೆ ಎಂದು ಅಣ್ಣಾಮಲೈ ಅವರ ಹೇಳಿಕೆಯ ಮೇಲೆ, ರಾಜ್ಯ ಪೊಲೀಸರು ಇದನ್ನು "ಅಸಂಬದ್ಧ" ಎಂದು ಕರೆದಿದ್ದು, "ಮಾಜಿ ಕರ್ನಾಟಕ ಪೊಲೀಸ್ ಅಧಿಕಾರಿ" ಉಲ್ಲೇಖಿಸಿರುವ ಎಚ್ಚರಿಕೆಯನ್ನು ವಾಡಿಕೆಯಂತೆ ಕೇಂದ್ರ ಸರಕಾರವು ಎಲ್ಲಾ ರಾಜ್ಯಗಳಿಗೆ ಕಳುಹಿಸಿತ್ತು ಎಂದು ಹೇಳಿದರು. ಅಲರ್ಟ್‌ನಲ್ಲಿ ಎಲ್ಲಿಯೂ ಕೊಯಮತ್ತೂರಿನ ನಿರ್ದಿಷ್ಟ ಉಲ್ಲೇಖವಿಲ್ಲ. ಅವರು (ಅಣ್ಣಾಮಲೈ) ಘಟನೆಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎರಡು ಪುಟಗಳ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.







