ಮೂರ್ತಿ ಪ್ರತಿಷ್ಠಾಪನೆ ವಿಜ್ಞಾಪನಾಪತ್ರ ಬಿಡುಗಡೆ

ಮಂಗಳೂರು, ಅ.30: ನೀರುಮಾರ್ಗ ಸಮೀಪದ ಪಡು ಸತ್ತಿಕಲ್ಲುವಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮಂದಿರದ ಜೀರ್ಣೋದ್ಧಾರ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಮೂರ್ತಿ ಪ್ರತಿಷ್ಠಾಪನೆಯ ವಿಜ್ಞಾಪನಾ ಪತ್ರವನ್ನು ಶಾಸಕ ಡಾ. ಭರತ್ ಶೆಟ್ಟಿ ರವಿವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭ ಗುರುಮಂದಿರದ ಅಧ್ಯಕ್ಷ ಯೋಗೀಶ್ ಸತಿಕಲ್ಲು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪದ್ಮನಾಭ್ ಕೋಟ್ಯಾನ್, ಪ್ರಧಾನ ಸಂಚಾಲಕ ನಾಗೇಶ್ ಕಾಪೆಟ್ಟು, ವಾಸ್ತುತಜ್ಞ ಈಶ್ವರ ಕಲಾಯಿ, ಗೆಜ್ಜೆಗಿರಿಯ ಆಡಳಿತ ಸಮಿತಿಯ ರವಿ ಪೂಜಾರಿ ಚಿಲಂಬಿ, ರಾಜೇಂದ್ರ ಚಿಲಿಂಬಿ, ಗ್ರಾಪಂ ಸದಸ್ಯರಾದ ಯಶೋದ ಜೆ. ಸಾಲ್ಯಾನ್, ಹರೀಶ್ ಹೊಸಮನೆ, ಮೀನಾಕ್ಷಿ ಬೀರ್ಣಮಾಜಲ್, ಸುರೇಖಾ ಚೆನ್ನಪ್ಪ ಅಮೀನ್ ಹಾಗೂ ಗೌರವ ಅಧ್ಯಕ್ಷ ನಾರಾಯಣ ಮಾಸ್ಟರ್ ಸತ್ತಿಕಲ್, ಜಯರಾಮ ಸತ್ತಿಕಲ್, ಜಗನ್ನಾಥ ಸನಿಲ್ ಕೊನಿಮಾರ್ ಉಪಸ್ಥಿತರಿದ್ದರು.
Next Story