Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ...

2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

30 Oct 2022 6:58 PM IST
share
2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು: ಇಸ್ರೋ ಮಾಜಿ ನಿರ್ದೇಶಕ ಕೆ.ಶಿವನ್, ಹಿರಿಯ ಸಾಹಿತಿ ಅ.ರಾ. ಮಿತ್ರ, ವಿಕಲಚೇತನ ಕ್ರೀಡಾಪಟು ರಾಘವೇಂದ್ರ ಅಣ್ವೇಕರ್, ಸೋಲಿಗ ಸಮುದಾಯದ ಮಾದಮ್ಮ, ಪೌರಸೇನಾನಿ ಮಲ್ಲಮ್ಮ ಸೇರಿದಂತೆ ಅರವತ್ತೇಳನೆ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ 67 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇದೇ ವೇಳೆ 75ನೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಸಂಘ-ಸಂಸ್ಥೆಗಳಿಗೆ ‘ಅಮೃತ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ’ಯನ್ನು ರಾಜ್ಯ ಸರಕಾರ ರವಿವಾರ ಪ್ರಕಟಿಸಿದೆ.

ಸಾಹಿತಿ ಪ್ರೊ.ಕೃಷ್ಣೇಗೌಡ, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ವನ ಸಂರಕ್ಷಣೆಗಾಗಿ ಜೀವನವನ್ನೆ ಮುಡುಪಾಗಿಟ್ಟ ರಾಮನಗರದ ಸಾಲುಮರದ ನಿಂಗಣ್ಣ, ಹಿರಿಯ ನಟರಾದ ದತ್ತಣ್ಣ, ಅವಿನಾಶ್, ಉಡುಪಿ ಜಿಲ್ಲೆಯ ದೈವನರ್ತಕ ಗುಡ್ಡ ಪಾಣಾರ, ಕಿರುತೆರೆ ನಟ ಸಿಹಿಕಹಿ ಚಂದ್ರು, ಯಕ್ಷಗಾನ ಕಲಾವಿದರಾದ ಡಾ.ಎಂ.ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ, ವೀರಗಾಸೆ ಕಲಾವಿದ ಹಾವೇರಿಯ ಮಹೇಶ್ವರಗೌಡ ಲಿಂಗದಹಳ್ಳಿ, ಕಮಲಮ್ಮ ಸೂಲಗಿತ್ತಿ, ಹಿರಿಯ ಸಂಗೀತ ವಿದ್ವಾಂಸ ಅನಂತಾಚಾರ್ಯ ಬಾಳಾಚಾರ್ಯ, ಹಿರಿಯ ಪತ್ರಕರ್ತರಾದ ಎಚ್.ಆರ್.ಶ್ರೀಶಾ, ಜಿ.ಎಂ.ಶಿರಹಟ್ಟಿ, ಹಿರಿಯ ಸಂಶೋಧಕ ಡಾ.ಎಂ.ಜಿ. ನಾಗರಾಜ್ ಸೇರಿದಂತೆ 67 ಮಂದಿ ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹತ್ತು ಸೇವಾ ಸಂಘಟನೆಗಳನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮೈಸೂರಿನ ರಾಮಕೃಷ್ಣ ಆಶ್ರಮ, ಬೆಂಗಳೂರಿನ ಅಮೃತ ಶಿಶು ನಿವಾಸ, ಸುಮನಾ ಪೌಂಡೇಶನ್, ಹಾವೇರಿಯ ಅಗಡಿ ಫಾಮ್ರ್ಸ್, ಗದಗ ಜಿಲ್ಲೆಯ ಲಿಂಗಾಯತ ಪ್ರಗತಿಶೀಲ ಸಂಸ್ಥೆ ಸೇರಿ ಹತ್ತು ಸಂಘಟನೆಗಳನ್ನು ಆಯ್ಕೆ ಮಾಡಲಾಗಿದೆ.

ನ.1ಕ್ಕೆ ಪ್ರಶಸ್ತಿ ಪ್ರದಾನ: ‘ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಇದೇ ಮೊದಲ ಬಾರಿಗೆ 5ಲಕ್ಷ ರೂ.ನಗದು, 25 ಗ್ರಾಂ ಚಿನ್ನ, ಪ್ರಶಸ್ತಿ ಫಲಕವನ್ನು ನೀಡಲಾಗುತ್ತಿದೆ. ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ 1ಲಕ್ಷ ರೂ.ನಗದು ಹಾಗೂ 20ಗ್ರಾಂ ಚಿನ್ನವನ್ನು ನೀಡಲಾಗುತ್ತಿದ್ದು, ಆ ಮೊತ್ತವನ್ನು 5ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿಯಲ್ಲಿ 10 ಸಂಸ್ಥೆಗಳಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.

‘ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಸಮತೋಲಿತವಾಗಿದ್ದು, ಎಲೆಮರೆಯ ಸಾಧಕರನ್ನು ಗುರುತಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ಅಳೆದು-ತೂಗಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಅಸಾಮಾನ್ಯ ಸಾಧನೆ ಮಾಡಿದ ಶ್ರೀಸಾಮಾನ್ಯರು, ಅರ್ಹ ಸಾಧಕರನ್ನು ಗುರುತಿಸಿದ್ದೇವೆ. ಒಂದರ್ಥದಲ್ಲಿ ಕೇಂದ್ರ ಸರಕಾರದ ಪದ್ಮ ಪ್ರಶಸ್ತಿ ಮಾದರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ನಾವು ಆಯ್ಕೆ ಮಾಡಿದ ವ್ಯಕ್ತಿಗಳಲ್ಲಿ ಕೆಲವು ಸಾಧಕರು ಎಷ್ಟು ಮುಗ್ಧರಾಗಿದ್ದರೆಂದರೆ ನಿಮ್ಮ ಫೋಟೊ ಕೊಡಿ ಎಂದಾಗ, ಇಲ್ಲ ಎಂದು ಹೇಳಿದ್ದರು. ಅಷ್ಟರ ಮಟ್ಟಿಗೆ ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಬಯಸದೇ ಕಾರ್ಯ ಸಾಧಕರಾಗಿದ್ದರು. ಇಂಥವರನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳುವುದಕ್ಕೆ ಅಭಿಮಾನವಾಗುತ್ತದೆ. ದೈವ ನರ್ತಕರು ಹಾಗೂ ವೀರಗಾಸೆ ಕಲಾವಿದರು, ಪೌರ ಸೇನಾನಿಗಳನ್ನು ಗೌರವಿಸಿದ್ದೇವೆ. ಈ ಆಯ್ಕೆಯಿಂದ ಪ್ರಶಸ್ತಿಯ ಮೌಲ್ಯ ನಿಜಕ್ಕೂ ಹೆಚ್ಚಿದೆ’
-ವಿ.ಸುನಿಲ್ ಕುಮಾರ್ ಕನ್ನಡ-ಸಂಸ್ಕೃತಿ ಸಚಿವ


ಅಮೃತ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿ: ರಾಮಕೃಷ್ಣ ಆಶ್ರಮ- ಮೈಸೂರು, ತಲಸೆಮಿಯಾ ಮತ್ತು ಹೀಮೋಫೀಲಿಯ-ಬಾಗಲಕೋಟೆ, ಲಿಂಗಾಯುತ ಪ್ರಗತಿಶೀಲ ಸಂಸ್ಥೆ-ಗದಗ, ಅಗಡಿ ತೋಟ-ಹಾವೇರಿ, ಅಮೃತ ಶಿಶು ನಿವಾಸ-ಬೆಂಗಳೂರು, ಸುಮನಾ ಫೌಂಡೇಷನ್-ಬೆಂಗಳೂರು, ಯುವ ವಾಹಿನಿ ಸಂಸ್ಥೆ-ದಕ್ಷಿಣ ಕನ್ನಡ, ನಲೆ ಫೌಂಡೇಶನ್-ಅನಾಥ ಮಕ್ಕಳ ಪುನರ್ವಸತಿ ಕೇಂದ್ರ-ಬೆಂಗಳೂರು, ನಮ್ಮನೆ ಸುಮ್ಮನೆ-ನಿರಾಶ್ರಿತ ಅಕ್ರಮ (ಮಂಗಳಮುಖಿ ಸಂಸ್ಥೆ)-ಬೆಂಗಳೂರು ಹಾಗೂ ಶ್ರೀ ಉಮಾಮಹೇಶ್ವರಿ ಹಿಂದುಳಿದ ವರ್ಗ ಅಭಿವೃದ್ಧಿ ಟ್ರಸ್ಟ್-ಮಂಡ್ಯ. 

ಪ್ರಶಸ್ತಿಗೆ ಆಯ್ಕೆಗೊಂಡವರ ಪಟ್ಟಿ ಇಲ್ಲಿದೆ.

ಸಂಕೀರ್ಣ ಕ್ಷೇತ್ರ: ಸುಬ್ಬರಾಮ ಶೆಟ್ಟಿ / ಆರ್‌ವಿ ಸಂಸ್ಥೆಗಳು, ವಿದ್ವಾನ್‌ ಗೋಪಾಲಕೃಷ್ಣ ಶರ್ಮ, ಸೋಲಿಗರ ಮಾದಮ್ಮ

ಸೈನಿಕ ಕ್ಷೇತ್ರ: ಸುಬೇದಾರ್‌ ಬಿ.ಕೆ.ಕುಮಾರಸ್ವಾಮಿ

ಪತ್ರಿಕೋದ್ಯಮ ಕ್ಷೇತ್ರ: ಹೆಚ್‌.ಆರ್‌.ಶ್ರೀಶಾ,  ಜಿ.ಎಂ. ಶಿರಹಟ್ಟಿ 

ವಿಜ್ಞಾನ - ತಂತ್ರಜ್ಞಾನ ಕ್ಷೇತ್ರ: ಕೆ. ಶಿವನ್‌, ಡಿ.ಆರ್‌. ಬಳೂರಗಿ

ಕೃಷಿ ಕ್ಷೇತ್ರ: ಗಣೇಶ್ ತಿಮ್ಮಯ್ಯ, ಚಂದ್ರಶೇಖರ್ ನಾರಾಯಣಪುರ

ಪರಿಸರ ಕ್ಷೇತ್ರ: ಸಾಲುಮರದ ನಿಂಗಣ್ಣ

ಪೌರಕಾರ್ಮಿಕ ಕ್ಷೇತ್ರ: ಮಲ್ಲಮ್ಮ ಹೂವಿನಹಡಗಲಿ

ಆಡಳಿತ ಕ್ಷೇತ್ರ: ಎಲ್‌.ಹೆಚ್‌.ಮಂಜುನಾಥ್‌, ಮದನ್ ಗೋಪಾಲ್‌

ಹೊರನಾಡು ಕ್ಷೇತ್ರ: ದೇವಿದಾಸ ಶೆಟ್ಟಿ, ಅರವಿಂದ್ ಪಾಟೀಲ್‌, ಕೃಷ್ಣಮೂರ್ತಿ ಮಾಂಜಾ

ಹೊರದೇಶ ಕ್ಷೇತ್ರ: ರಾಜ್‌ಕುಮಾರ್‌

ವೈದ್ಯಕೀಯ ಕ್ಷೇತ್ರ: ಡಾ.ಹೆಚ್‌.ಎಸ್‌.ಮೋಹನ್‌, ಡಾ.ಬಸವಂತಪ್ಪ

ಯಕ್ಷಗಾನ: ಎಂ.ಎ.ನಾಯಕ್(ಉಡುಪಿ), ಸುಬ್ರಹ್ಮಣ್ಯ ಧಾರೇಶ್ವರ(ಉತ್ತರ ಕನ್ನಡ), ಸರಪಾಡಿ ಅಶೋಕ್ ಶೆಟ್ಟಿ(ದಕ್ಷಿಣ ಕನ್ನಡ).

ಬಯಲಾಟ: ಅಡವಯ್ಯ ಚ ಹಿರೇಮಠ್(ದೊಡ್ಡಾಟ)-ಧಾರವಾಡ, ಶಂಕರಪ್ಪ ಮಲ್ಲಪ್ಪ ಹೊರಪೇಟೆ (ಕೊಪ್ಪಳ), ಎಚ್.ಪಾಂಡುರಂಗಪ್ಪ(ಬಳ್ಳಾರಿ).

ಸಾಹಿತ್ಯ: ಶಂಕರ ಚಚಡಿ(ಬೆಳಗಾವಿ), ಪ್ರೊ.ಕೃಷ್ಣೇಗೌಡ(ಮೈಸೂರು), ಅಶೋಕ್ ಬಾಬು ನೀಲಗಾರ್(ಬೆಳಗಾವಿ), ಪ್ರೊ.ಅ.ರಾ.ಮಿತ್ರ(ಹಾಸನ), ರಾಮಕೃಷ್ಣ ಮರಾಠೆ(ಕಲಬುರಗಿ).

ರಂಗಭೂಮಿ ಕ್ಷೇತ್ರ: ತಿಪ್ಪಣ್ಣ ಹೆಳವರ್‌, ಲಲಿತಾಬಾಯಿ ಚನ್ನದಾಸರ್‌, ಗುರುನಾಥ್ ಹೂಗಾರ್‌, ಪ್ರಭಾಕರ್ ಜೋಶಿ, ಶ್ರೀಶೈಲ ಹುದ್ದಾರ್‌

ಸಂಗೀತ ಕ್ಷೇತ್ರ: ನಾರಾಯಣ.ಎಂ, ಅನಂತಚಾರ್ಯ ಬಾಳಾಚಾರ್ಯ, ಅಂಜಿನಪ್ಪ ಸತ್ಪಾಡಿ, ಅನಂತ ಕುಲಕರ್ಣಿ

ಜಾನಪದ ಕ್ಷೇತ್ರ: ಸಹಮದೇವಪ್ಪ ಈರಪ್ಪ ನಡಿಗೇರ್‌, ಗುಡ್ಡ ಪಾಣಾರ, ಕಮಲಮ್ಮ ಸೂಲಗಿತ್ತಿ, ಸಾವಿತ್ರಿ ಪೂಜಾರ್‌, ರಾಚಯ್ಯ ಸಾಲಿಮಠ, ಮಹೇಶ್ವರ್ ಗೌಡ

ಚಲನಚಿತ್ರ ಕ್ಷೇತ್ರ: ದತ್ತಣ್ಣ, ಅವಿನಾಶ್‌

ಕಿರುತೆರೆ ಕ್ಷೇತ್ರ: ಸಿಹಿಕಹಿ ಚಂದ್ರು

ಶಿಕ್ಷಣ ಕ್ಷೇತ್ರ: ಕೋಟಿ ರಂಗಪ್ಪ, ಡಾ.ಎಂ.ಜಿ.ನಾಗರಾಜ್

ಕ್ರೀಡೆ ಕ್ಷೇತ್ರ: ದತ್ತಾತ್ರೇಯ ಗೋವಿಂದ ಕುಲಕರ್ಣಿ, ರಾಘವೇಂದ್ರ ಅಣ್ಣೇಕರ್

ನೃತ್ಯ ಕ್ಷೇತ್ರ: ಕಮಲಾಕ್ಷಾಚಾರ್ಯ

share
Next Story
X