ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರ : ವೇಳಾಪಟ್ಟಿ ಪ್ರಕಟ
ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮತ್ತು ಮಣಿಪಾಲದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಎಸ್ಸಾರ್ಟಿಸಿ (ಎಸಿ ವೋಲ್ವೋ) ಬಸ್‌ಗಳ ಸಂಚಾರ ಅ.31ರಿಂದ ಆರಂಭಗೊಳ್ಳಲಿದೆ.
ಈ ಬಸ್ ರೈಲು ನಿಲ್ದಾಣದಿಂದ ಜ್ಯೋತಿ, ಲಾಲ್‌ಭಾಗ್, ಕುಂಟಿಕಾನ, ಕಾವೂರು ಮೂಲಕ ಬಜ್ಪೆ ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ 100 ರೂ ಹಾಗೂ ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ 300 ರೂ. ದರ ನಿಗದಿಪಡಿಸಲಾಗಿದೆ.
ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 6.30, ಬೆಳಗ್ಗೆ 8.45, ಪೂರ್ವಾಹ್ನ 11:10, ಅಪರಾಹ್ನ 3:00, ಸಂಜೆ 5:15, ರಾತ್ರಿ 7:30. ಮತ್ತು ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಬೆಳಗ್ಗೆ 7:40, ಬೆಳಗ್ಗೆ 10:00, ಮಧ್ಯಾಹ್ನ 12:20, ಸಂಜೆ 4:05, ಸಂಜೆ 6:25, ರಾತ್ರಿ 8:45ಕ್ಕೆ ಪ್ರಯಾಣಿಸಲಿದೆ.
ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 7:15, ಬೆಳಗ್ಗೆ 8:45 ಮತ್ತು ಸಂಜೆ 5:15 ಹಾಗೂ ವಿಮಾನ ನಿಲ್ದಾಣದಿಂದ ಮಣಿಪಾಲಕ್ಕೆ: ಬೆಳಗ್ಗೆ 10:45, ಮಧ್ಯಾಹ್ನ 12:30 ಮತ್ತು ರಾತ್ರಿ 9:15ಕ್ಕೆ ಬಸ್ ಸಂಚರಿಸಲಿದೆ.