ಪಡುಬಿದ್ರೆ: ಮಗುವಿನೊಂದಿಗೆ ತಾಯಿ ನಾಪತ್ತೆ

ಪಡುಬಿದ್ರೆ : ಪತ್ನಿ ಹಾಗೂ ಮಗು ನಾಪತ್ತೆಯಾಗಿರುವುದಾಗಿ ಪತಿ ಶ್ರೀಕಾಂತ್ ಹರಿಜನ ಎಂಬವರು ಪಡುಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇವರು 9 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದು, 1 ವರ್ಷದ ಹಿಂದೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಬಳಿಕ ಆಕೆಯನ್ನು ತಾಯಿಯ ಮನೆಯಲ್ಲಿ ಬಿಡಲಾಗಿತ್ತು. 15 ದಿನಗಳ ಹಿಂದೆ ಪಡುಬಿದ್ರೆಗೆ ಬಂದು ಇಲ್ಲಿನ ಸುಣ್ಣದ ಗೂಡು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಕೆಲಸಕ್ಕೆ ಹೋಗಿದ್ದ ಶ್ರೀಕಾಂತ್ ಮನೆಗೆ ಬಂದು ನೋಡಿದಾಗ ಬಾಗಿಲು ಚಿಲಕ ಹಾಕಿದ್ದು ಮನೆಯ ಒಳಗಡೆ ಹೋದಾಗ ಪತ್ನಿ ಮತ್ತು ಮಗನ ಬಟ್ಟೆಗಳು ಇರಲಿಲ್ಲ. ಅಕ್ಕ ಪಕ್ಕದವರನ್ನು, ಸಂಬಂಧಿಕರನ್ನು ವಿಚಾರಿಸಿದಾಗ ಪತ್ನಿ ಮತ್ತು ಮಗ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಾರೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





