ಟ್ವೆಂಟಿ-20 ವಿಶ್ವಕಪ್: ಭಾರತ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಗೆಲುವು
ಮರ್ಕ್ರಮ್, ಡೇವಿಡ್ ಮಿಲ್ಲರ್ ಅರ್ಧಶತಕ , ಲುಂಗಿ ಗಿಡಿ, ವೇಯ್ನೆ ಪಾರ್ನೆಲ್ ಅಮೋಘ ಬೌಲಿಂಗ್

ಪರ್ತ್, ಅ.30: ಲುಂಗಿ ಗಿಡಿ (4-29)ಹಾಗೂ ವೇಯ್ನೆ ಪಾರ್ನೆಲ್(3-15) ನಿಖರ ಬೌಲಿಂಗ್ ದಾಳಿ, ಡೇವಿಡ್ ಮಿಲ್ಲರ್(ಔಟಾಗದೆ 59 ರನ್, 46 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಮರ್ಕ್ರಮ್ (52 ರನ್, 41 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧ ರವಿವಾರ ನಡೆದ ವಿಶ್ವಕಪ್‌ನ ಸೂಪರ್-12 ಸುತ್ತಿನ ಗ್ರೂಪ್-2ರ ಪಂದ್ಯದಲ್ಲಿ 5 ವಿಕೆಟ್ ಅಂತರದಿಂದ ಜಯ ಸಾಧಿಸಿದೆ.
ಗೆಲ್ಲಲು 134 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿದೆ.
ದಕ್ಷಿಣ ಆಫ್ರಿಕಾವು 5.4 ಓವರ್‌ಗಳಲ್ಲಿ 24 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ 4ನೇ ವಿಕೆಟಿಗೆ 76 ರನ್ ಜೊತೆಯಾಟ ನಡೆಸಿದ ಮರ್ಕ್ರಮ್ ಹಾಗೂ ಮಿಲ್ಲರ್ ತಂಡವನ್ನು ಆಧರಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತವು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು.