ಗುಜರಾತ್ ಸೇತುವೆ ದುರಂತ: 60 ಕ್ಕೇರಿದ ಮೃತರ ಸಂಖ್ಯೆ; ಇನ್ನಷ್ಟು ಹೆಚ್ಚಾಗುವ ಆತಂಕ
ಘಟನೆ ಹೊಣೆಯನ್ನು ಹೊತ್ತುಕೊಂಡ ಸರ್ಕಾರ

ಘಟನೆ ಹೊಣೆಯನ್ನು ಹೊತ್ತುಕೊಂಡ ಸರ್ಕಾರ
ಅಹಮದಾಬಾದ್: ಗುಜರಾತ್‌ನ ಮೋರ್ಬಿಯಲ್ಲಿ ನಡೆದ ಸೇತುವೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 60 ಕ್ಕೇರಿದೆ ಎಂದು ವರದಿಯಾಗಿದೆ. ಬ್ರಿಟಿಷರ ಕಾಲದ ಸೇತುವೆ ನವೀಕರಣಗೊಂಡ ಒಂದು ವಾರದ ನಂತರ ಈ ದುರಂತ ನಡೆದಿದೆ.
ಸೇತುವೆ ಕುಸಿಯುವಾಗ ಅದರ ಮೇಲೆ 500 ಕ್ಕೂ ಹೆಚ್ಚು ಮಂದಿ ಇದ್ದರು, ಕುಸಿತದ ಪರಿಣಾಮ 100 ಕ್ಕೂ ಮಂದಿ ನದಿಗೆ ಬಿದ್ದಿದ್ದಾರೆ. ನದಿಗೆ ಬಿದ್ದವರನ್ನು ರಕ್ಷಿಸುವ ಕಾರ್ಯ ಇನ್ನೂ ಮುಂದುವರೆದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ದುರಂತದ ಸಂಪೂರ್ಣ ಹೊಣೆಯನ್ನು ಗುಜರಾತ್ ಸರ್ಕಾರ ಹೊತ್ತುಕೊಂಡಿದೆ.
Next Story