ಪುಟಿನ್ ಅಣ್ವಸ್ತ್ರ ಬಳಸುವ ಬಗ್ಗೆ ಮಾಜಿ ಪ್ರಧಾನಿ ಟ್ರಸ್ ಗೆ ಆತಂಕವಿತ್ತು: ವರದಿ

ಲಂಡನ್, ಅ.30: ಬ್ರಿಟನ್‌ನ ಮಾಜಿ ಪ್ರಧಾನಿ ಲಿರ್ ಟ್ರಸ್ ಪ್ರಧಾನಿ ಹುದ್ದೆಯ ಅಂತಿಮ ದಿನಗಳನ್ನು ರಶ್ಯ ಅಣ್ವಸ್ತ್ರ ದಾಳಿ ನಡೆಸಬಹುದು ಎಂಬ ಆತಂಕದಲ್ಲಿಯೇ ಕಳೆದಿದ್ದರು ಎಂದು ‘ದಿ ಮಿರರ್’ ವರದಿ ಮಾಡಿದೆ.
ಉಕ್ರೇನ್ ಮೇಲಿನ ಆಕ್ರಮಣದಲ್ಲಿ ರಶ್ಯಕ್ಕೆ ಯೋಜಿತ ರೀತಿಯಲ್ಲಿ ಮುನ್ನಡೆ ಸಾಧ್ಯವಾಗುತ್ತಿಲ್ಲ ಎಂಬ ವರದಿಯ ಮಧ್ಯೆ, ಅಗತ್ಯಬಿದ್ದರೆ ಅಣ್ವಸ್ತ್ರ ಬಳಸಲೂ ಹಿಂಜರಿಯುವುದಿಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಯ ಬಳಿಕ ರಶ್ಯ ಕಪ್ಪು ಸಮುದ್ರದ ಮೇಲಿಂದ ಅಣ್ವಸ್ತ್ರ ದಾಳಿ ನಡೆಸಬಹುದು ಎಂದು ಟ್ರಸ್ ಆತಂಕಿತರಾಗಿದ್ದರು ಹಾಗೂ ‘ರಕ್ಷಿಸುವ ಮತ್ತು ಬದುಕುಳಿಯುವ ಯೋಜನೆ’ ಜಾರಿಗೊಳಿಸಬೇಕೇ ಎಂಬ ಗೊಂದಲದಲ್ಲಿದ್ದರು ಎಂದು ವರದಿ ಹೇಳಿದೆ. ಪರಮಾಣು ದಾಳಿಯ ಸಂದರ್ಭ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಬಗ್ಗೆ ಜನತೆಗೆ ಸಲಹೆ ನೀಡುವ ‘ರಕ್ಷಿಸುವ ಮತ್ತು ಬದುಕುಳಿಯುವ ಯೋಜನೆ’ಯನ್ನು ಬ್ರಿಟನ್ ಸರಕಾರ 1974-80ರ ನಡುವಿನ ಅವಧಿಯಲ್ಲಿ ರೂಪಿಸಿದೆ.
Next Story